Airport like Facilities in Belagavi railway station : Suresh Angadi , MP
ಏರ್*ಪೋರ್ಟ್* ಮಾದರಿ ರೈಲ್ವೆ ನಿಲ್ದಾಣ ಅಭಿವೃದ್ಧಿ
ಐತಿಹಾಸಿಕ ಹಿನ್ನೆಲೆ ಇರುವ ಬೆಳಗಾವಿ ರೈಲು ನಿಲ್ದಾಣವನ್ನು ಏರ್*ಪೋರ್ಟ್* ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದಕ್ಕೆ ಬೇಕಿರುವ ಕಾರ್ಯಯೋಜನೆ ಸಿದ್ಧಗೊಂಡಿರುವುದಾಗಿ ಸಂಸದ ಸುರೇಶ ಅಂಗಡಿ ಹೇಳಿದ್ದಾರೆ.
ಬೆಳಗಾವಿ: ಐತಿಹಾಸಿಕ ಹಿನ್ನೆಲೆ ಇರುವ ಬೆಳಗಾವಿ ರೈಲು ನಿಲ್ದಾಣವನ್ನು ಏರ್*ಪೋರ್ಟ್* ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದಕ್ಕೆ ಬೇಕಿರುವ ಕಾರ್ಯಯೋಜನೆ ಸಿದ್ಧಗೊಂಡಿರುವುದಾಗಿ ಸಂಸದ ಸುರೇಶ ಅಂಗಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ''ನಿಲ್ದಾಣದ ಅಭಿವೃದ್ಧಿಗೆ ಈಗಾಗಲೇ 2 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈಗ ಮತ್ತೆ 2 ಕೋಟಿ ರೂ.ಗಳಲ್ಲಿ ಮೂಲಸೌಕರ್ಯ ಮತ್ತು ಇತರೆ ಅನುಕೂಲಗಳನ್ನು ಕಲ್ಪಿಸಲಾಗುವುದು'', ಎಂದು ತಿಳಿಸಿದರು.
''ಏರ್*ಪೋರ್ಟ್* ಮಾದರಿಯ ಸ್ವಚ್ಛತೆ, ಬೆಳಕು, ಪ್ರಯಾಣಿಕರಿಗೆ ಅಗತ್ಯ ಮಾಹಿತಿ, ವಿಶ್ರಾಂತಿಗೆ ಆಸನ, ಕೊಠಡಿ, ಪಾರ್ಕಿಂಗ್* ಒಳಗೊಂಡು ಇತರೆ ಸೌಲಭ್ಯಗಳು ಇರಲಿವೆ. ಉದ್ಯಮಿ ಅರವಿಂದ ಗೋಗಟೆ ಎರಡು ಎಸ್ಕಲೇಟರ್* (ಲಿಫ್ಟ್*)ಗಳನ್ನು ದೇಣಿಗೆ ರೂಪದಲ್ಲಿ ನೀಡುವ ಭರವಸೆ ಕೊಟ್ಟಿದ್ದಾರೆ'', ಎಂದರು.
''ಈಗಿರುವ ವ್ಯವಸ್ಥೆ ಉಳಿಸಿಕೊಂಡೇ ಅಭಿವೃದ್ಧಿ ಮಾಡಲಾಗುತ್ತದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಮಹಾತ್ಮಾಗಾಂಧಿ ನಿಲ್ದಾಣದಲ್ಲಿ ಇಳಿದು ಹೋಗಿರುವ ಸ್ಮೃತಿಗೂ ಹೊಸ ರೂಪ ನೀಡಲಾಗುತ್ತದೆ. ಒಟ್ಟಾರೆ ಸಾಬರಮತಿ ಮಾದರಿಯಲ್ಲಿ ನಿಲ್ದಾಣವಿರುವಂತೆ ರೈಲ್ವೆ ಸಚಿವ ಪಿಯೂಷ್* ಗೋಯಲ್* ಇಲ್ಲಿಗೆ ಬಂದಿದ್ದಾಗ ತಿಳಿಸಿದ್ದರು. ಅದೇ ಮಾದರಿಯಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗಿದೆ'', ಎಂದು ಸಂಸದ ಅಂಗಡಿ ತಿಳಿಸಿದರು.
''ನೀಲನಕ್ಷೆ ಸಿದ್ಧಪಡಿಸುವಾಗ ಚೇಂಬರ್* ಆಫ್* ಕಾಮರ್ಸ್*, ಪ್ರೊಫೆಶನರ್* ಫೋರಂ, ಸ್ಮಾರ್ಟ್* ಸಿಟಿ, ಲೋಕೋಪಯೋಗಿ ಇಲಾಖೆ, ಕಂಟೋನ್ಮೆಂಟ್* ಒಳಗೊಂಡು ಇತರರಿಂದಲೂ ಸಲಹೆ ಪಡೆಯಲಾಗಿದೆ. ಭದ್ರತೆ, ಪ್ರೀಪೇಡ್* ಆಟೋ, ರಸ್ತೆಗಳು, ಎದುರಿನ ಬಸ್* ನಿಲ್ದಾಣದ ಅಭಿವೃದ್ಧಿ ಕಡೆಗೂ ಗಮನ ನೀಡಲಾಗುತ್ತದೆ'', ಎಂದರು.
ಪಾಲಿಕೆ ಆಯುಕ್ತ ಶಶಿಧರ ಕುರೇರ, ರೈಲ್ವೆ ಇಲಾಖೆಯ ಹಿರಿಯ ಎಂಜಿನಿಯರ್*ಗಳು ಉಪಸ್ಥಿತರಿದ್ದರು.
ಸಂಸದರು ಹೇಳಿದ್ದು :
- 3ನೇ ರೈಲ್ವೆಗೇಟ್* ಮೇಲ್ಸೇತುವೆ ಮಂಜೂರಾಗಿದ್ದು, ಅದರ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು.
- ರೈಲು ನಿಲ್ದಾಣದಲ್ಲಿರುವ ಗೂಡ್ಸ್*ಶೆಡ್*ಗಳನ್ನು ಸಾಂಬ್ರಾಕ್ಕೆ ಸ್ಥಳಾಂತರಿಸಲಾಗುತ್ತದೆ.
- ಕಪಿಲೇಶ್ವರ ಮೇಲ್ಸೇತುವೆ ಬಳಿಯೂ ಹಳಿಯ ಮೇಲೆ ಎರಡು ಎಸ್ಕಲೇಟರ್*ಗಳನ್ನು ಅಳವಡಿಸಲು ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ.
- ರೈಲ್ವೆ ನಿಲ್ದಾಣದ ವೈಫೈ ಸರಿಪಡಿಸಲಾಗುವುದು.
- ಖನಗಾಂವ್* ಬಳಿಯ ಬ್ರಿಜ್* ಅಭಿವೃದ್ಧಿ ಪಡಿಸಲಾಗುವುದು