Joined
·
10,453 Posts
track all the Gulbarga city transportation news/updates of NEKRTC, Nrupatunga Nagara Sarige etc.. :cheers:
Copyrights:- Binai Sankar

Copyrights:- Binai Sankar
:cheers:Total of Nrupatunga Buses operating is 40+10=50
![]()
good going NEKRTC & nrupatunga nagara sarige that too without any hype :cheers:ಮಹಾನಗರವಾಗಿ ಬೆಳೆಯುತ್ತಿರುವ ಗುಲ್ಬರ್ಗದಲ್ಲಿ `ನೃಪತುಂಗ ನಗರ ಸಾರಿಗೆ' 50 ಬಸ್ ಆರಂಭಿಸಿ ಸಾಕಷ್ಟು ಗಮನ ಸೆಳೆಯುತ್ತಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ರೂ. 20ಕ್ಕೆ ದಿನದ ಬಸ್*ಪಾಸ್ ನೀಡುವ ಯೋಜನೆಯನ್ನು ಡಿಸೆಂಬರ್ 1ರಿಂದ ಜಾರಿಗೊಳಿಸುತ್ತಿದೆ.
ದಿನದ ಬಸ್*ಪಾಸ್ ಪಡೆದುಕೊಂಡ ಪ್ರಯಾಣಿಕರು ನಗರದಾದ್ಯಂತ `ನೃಪತುಂಗ ನಗರ ಸಾರಿಗೆ' ಬಸ್*ಗಳಲ್ಲಿ ಒಂದು ದಿನದಮಟ್ಟಿಗೆ ಎಷ್ಟು ಸಲ ಬೇಕಾದರೂ ಪ್ರಯಾಣಿಸಬಹುದಾಗಿದೆ. ಸೂಪರ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣಗಳ ಸಂಚಾರ ನಿಯಂತ್ರಕರಲ್ಲಿ ಹಾಗೂ ನಗರ ಸಾರಿಗೆ ಬಸ್ ನಿರ್ವಾಹಕ ಹತ್ತಿರ ದಿನದ ಬಸ್*ಪಾಸ್ ದೊರೆಯಲಿವೆ.
ಬಸ್ ವೇಳಾಪಟ್ಟಿ: ಎಸ್*ಎಂಎಸ್ ಸೇವೆ
ಗುಲ್ಬರ್ಗ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುವ ಬಸ್*ಗಳ ವೇಳಾಪಟ್ಟಿಯನ್ನು ಪ್ರಯಾಣಿಕರು ತಮ್ಮ ಮೊಬೈಲ್*ನ್ಲ್ಲಲೇ ಪಡೆದುಕೊಳ್ಳುವ ಸೌಲಭ್ಯವನ್ನು ಜಾರಿಗೊಳಿಸಿದೆ.
ಮೊಬೈಲ್ ಮೂಲಕ ಕಿರು ಸಂದೇಶ ಸೇವೆ(ಎಸ್*ಎಂಎಸ್) ಯನ್ನು ಬಳಸಿಕೊಂಡು ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಸಂದೇಶ ರವಾನಿಸುವ ವಿಧಾನ ಈ ರೀತಿ ಇದೆ. ಎGET<space>FROMSTATION<space>TOSTATION<space>M ಎಂದು ಟೈಪ್ ಮಾಡಿ ಸಂದೇಶ ಕಳುಹಿಸಬೇಕು.
ದಿನದ ಯಾವ ಸಮಯದ ಬಸ್ ವೇಳಾಪಟ್ಟಿ ಎಂಬುದನ್ನು ತೋರಿಸಲು ಕೊನೆಯಲ್ಲಿ ಅಥವಾ A ಅಥವಾ E ಅಥವಾ A ( M-morning, A-afternoon, E-evening, N-night) ಎಂದು ಟೈಪ್ ಮಾಡಬೇಕು. ಟೈಪ್ ಮಾಡಿದ ಸಂದೇಶವನ್ನು 54646ಗೆ ಕಳುಹಿಸಿದರೆ, ಮಾಹಿತಿ ಲಭ್ಯವಾಗುತ್ತದೆ.
ಜನರು ದಿನದ ಬಸ್*ಪಾಸ್ ಹಾಗೂ ಎಸ್*ಎಂಎಸ್ ಮೂಲಕ ಮಾಹಿತಿ ಪಡೆದುಕೊಳ್ಳುವ ಅನುಕೂಲಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
http://www.prajavani.net
super :cheers:ಬೈಕ್ ಸೇರಿದಂತೆ ಯಾವುದೇ ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳುವುದು ಇನ್ನು ಸುಲಭದ ಮಾತಲ್ಲ. ಗುಲ್ಬರ್ಗದಲ್ಲಿ ಅತ್ಯಾಧುನಿಕ ವಾಹನಚಾಲನಾ ಪರೀಕ್ಷಾ ಪಥ (ಹೈಟೆಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್) ಶೀಘ್ರದಲ್ಲೆ ನಿರ್ಮಾಣವಾಗಲಿದೆ. ಇನ್ಮುಂದೆ ಪರೀಕ್ಷಾರ್ಥ ವಾಹನ ಚಾಲನೆ ಮಾಡುವವರ ಮೇಲೆ ಕಂಪ್ಯೂಟರ್ ನಿಗಾ ವಹಿಸಲಿದೆ.
ರಾಜ್ಯದಲ್ಲೆ ಪ್ರಪ್ರಥಮ ಹೈಟೆಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ಬೆಂಗಳೂರಿನ ಮಲ್ಲತಹಳ್ಳಿಯಲ್ಲಿ ಉದ್ಘಾಟನೆಗೊಂಡು ಕಾರ್ಯನಿರ್ವಹಿಸುತ್ತಿದೆ. ಇದೀಗ ಗುಲ್ಬರ್ಗ ನಗರಕ್ಕೆ ಈ ಅತ್ಯಾಧುನಿಕ ಸೌಲಭ್ಯ ವಿಸ್ತರಿಸಲು ರೂ. 4.15 ಕೋಟಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಈಗಾಗಲೇ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕೂಡಾ ಆಹ್ವಾನಿಸಲಾಗಿದೆ. ಯೋಜನೆ ಆರಂಭಗೊಂಡ ಮೊದಲವರ್ಷ ಮೂರು ಕೋಟಿ ವೆಚ್ಚ ಮಾಡುವುದಕ್ಕೆ ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಬೆಂಗಳೂರಿನಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಲಘು ವಾಹನ ಹಾಗೂ ಬೈಕ್ ಚಾಲನಾ ಪಥಗಳನ್ನು ಮಾತ್ರ ಕಂಪ್ಯೂಟರೀಕರಣಗೊಳಿಸಲಾಗಿದೆ. ಆದರೆ ಗುಲ್ಬರ್ಗದಲ್ಲಿ ಮೂರುವರೆ ಎಕರೆ ಜಾಗದಲ್ಲಿ ಲಘುವಾಹನ, ಭಾರಿವಾಹನ ಹಾಗೂ ಬೈಕ್ ಪಥಗಳನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸಲು ಯೋಜನೆ ಸಿದ್ಧವಾಗಿದೆ. ಹೈಟೆಕ್ ಡ್ರೈವಿಂಗ್ ಟ್ರ್ಯಾಕ್*ಗೆ ಸೆನ್ಸಾರ್*ಗಳನ್ನು ಅಳವಡಿಸಲು ಗುಜರಾತ್ ರಾಜ್ಯದ `ಸಾಲ್ಟ್ ವಾಟರ್' ಎನ್ನುವ ಕಂಪೆನಿಗೆ ಮುಂದೆ ಬಂದಿದ್ದು, ಕಾಮಗಾರಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಾಮಗಾರಿ ವಿಭಾಗವು ವಹಿಸಿಕೊಂಡಿದೆ.
`ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಎಲ್ಲ ರೀತಿಯ ನೀಲನಕ್ಷೆ ಸಿದ್ಧಪಡಿಸಿಕೊಂಡು ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಕಾಮಗಾರಿ ಕೈಗೊಳ್ಳುವುದಕ್ಕೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಟ್ರ್ಯಾಕ್ ಅಭಿವೃದ್ಧಿ ಕಾರ್ಯ ಆರಂಭಗೊಳ್ಳಲಿದೆ. ಯೋಜನೆ ಆರಂಭಿಸಿದ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು' ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು `ಪ್ರಜಾವಾಣಿ'ಗೆ ವಿವರಿಸಿದರು.
`ಬೆಂಗಳೂರಿನಲ್ಲಿ ಈ ಯೋಜನೆ ಯಶಸ್ವಿಯಾದ ನಂತರ ಧಾರವಾಡ, ಮೈಸೂರು ಹಾಗೂ ಗುಲ್ಬರ್ಗದಲ್ಲಿ ಹೈಟೆಕ್ ಡ್ರೈವಿಂಗ್ ಟ್ರ್ಯಾಕ್ ಯೋಜನೆ ಜಾರಿಯಾಗುತ್ತಿದೆ. ಗುಲ್ಬರ್ಗ ವಿಭಾಗದಲ್ಲಿ ಈಗಾಗಲೇ ಹುಮನಾಬಾದ್ ಸಾರಿಗೆ ಸಂಸ್ಥೆ ಅಡಿಯಲ್ಲಿ ಬಸ್ ಚಾಲಕರಿಗಾಗಿ ಮಾತ್ರ ಸೆನ್ಸಾರ್ ಒಳಗೊಂಡ ಸಂಪೂರ್ಣ ಕಂಪ್ಯೂಟರೀಕರಣ ಮಾಡಲಾದ ಟ್ರ್ಯಾಕ್ ಅಭಿವೃದ್ಧಿಗೊಳಿಸಲಾಗಿದೆ. ಇದರಿಂದಾಗಿ ಪಕ್ಕಾ ಚಾಲನೆ ತರಬೇತಿ ಪಡೆದುಕೊಂಡು ಚಾಲಕರನ್ನಷ್ಟೆ ಆಯ್ಕೆ ಮಾಡುವುದಕ್ಕೆ ಸಾಧ್ಯವಾಗುತ್ತಿದೆ. ನಗರದೊಳಗೆ ಮತ್ತು ಹೊರವಲಯದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಚಾಲಕರು ತುಂಬಾ ಜಾಗರೂಕತೆಯಿಂದ ವಾಹನ ಓಡಿಸುವ ಅಗತ್ಯವನ್ನು ಮನಗಂಡು, ಚಾಲನಾ ಪರವಾನಗಿ ನೀಡುವುದಕ್ಕೆ ವೈಜ್ಞಾನಿಕ ವಿಧಾನ ಅನುಸರಿಸಲಾಗುತ್ತಿದೆ' ಎಂದರು.
ಗುಲ್ಬರ್ಗದ ಕುಸನೂರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ರಿಂಗ್*ರಸ್ತೆ ಹತ್ತಿರ ಇರುವ ಟ್ರ್ಯಾಕ್ ಇನ್ನು ಮುಂದೆ ಸಂಪೂರ್ಣ ಹಸಿರು ಉದ್ಯಾನದಿಂದ ಕಂಗೊಳಿಸಲಿದೆ. ಮೂರುವರೆ ಎಕರೆ ಜಾಗದಲ್ಲಿ ವಾಹನಗಳ ನಿಲ್ದಾಣ, ಕಂಪ್ಯೂಟರ್ ಕೋಣೆಗಳು, ವಿವಿಧ ಸಿಗ್ನಲ್*ಗಳು ಹಾಗೂ ಒಟ್ಟು ಎಂಟು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಬೈಕ್ ಚಾಲನಾ ಪರೀಕ್ಷೆಗೆ `ಎಟ್' ಇಂಗ್ಲಿಷ್ ಅಂಕಿ ಮಾದರಿ ಪಥ, ಲಘು ವಾಹನ ಚಾಲನಾ ಪರೀಕ್ಷೆಗೆ `ಎಸ್' ಇಂಗ್ಲಿಷ್ ಅಕ್ಷರ ಮಾದರಿ ಪಥ ಹಾಗೂ ಭಾರಿ ವಾಹನ ಚಾಲನೆಯ ಪಥಗಳನ್ನು ನಿರ್ಮಿಸಲಾಗುತ್ತದೆ.
ಹೈಟೆಕ್ ಚಾಲನಾ ಪರೀಕ್ಷೆ ಹೇಗೆ:ಪಥದ ಉದ್ದ ಹಾಗೂ ಅಗಲಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಿಸಲಾಗುವುದು. ಪ್ರತಿಯೊಂದು ಪಥದ ಬದಿಗೆ ಸೆನ್ಸಾರ್*ಗಳನ್ನು ಅಳವಡಿಸಲಾಗುತ್ತದೆ. ಚಾಲನಾ ಪರೀಕ್ಷೆ ವೇಳೆ ಚಾಲಕರು ವಾಹನದೊಂದಿಗೆ ಚಲಿಸುವಾಗ ಪಥದ ಬದಿಗೆ ಹೊಡೆದರೆ ಅಥವಾ ವಾಹನ ಸ್ಥಗಿತಗೊಳಿಸಿದರೆ ಪರವಾನಗಿ ನೀಡುವುದಕ್ಕೆ ಕಂಪ್ಯೂಟರ್ ವ್ಯವಸ್ಥೆ ನಿರಾಕರಿಸುತ್ತದೆ. ಪಥದಲ್ಲಿ ವಾಹನ ಚಲಿಸುವ ಪೂರ್ವದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೆ ಸಿಗ್ನಲ್ ಹಾಗೂ ಕಂಪ್ಯೂಟರ್ ಪಥದ ಕುರಿತು ಪಾಠ ಮಾಡಲಾಗುತ್ತದೆ.
`ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಭಾವ ಹಾಗೂ ಅರ್ಧಮರ್ಧ ಚಾಲನಾ ತರಬೇತಿ ಪಡೆದು ಚಾಲನಾ ಪರವಾನಗಿ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಇನ್ನು ಮುಂದೆ ಇದ್ಯಾವುದಕ್ಕೂ ಅವಕಾಶವಾಗದಿರುವುದು ಒಳ್ಳೆಯ ಬೆಳವಣಿಗೆ. ರಸ್ತೆ ಅಪಘಾತಗಳನ್ನು ಕಡಿಮೆಯಾಗುವುದಕ್ಕೆ ವಾಹನ ಸವಾರರು ಸಾಕಷ್ಟು ತರಬೇತಿ ಹೊಂದಿದರೆ ಮಾತ್ರ ಪರವಾನಗಿ ಪಡೆದುಕೊಳ್ಳುವುದಕ್ಕೆ ಕಂಪ್ಯೂಟರ್ ಸಾಫ್ಟ್*ವೇರ್ ಅನುಮತಿ ನೀಡುತ್ತದೆ.
ಪಥದಲ್ಲಿನ ಪ್ರತಿಯೊಂದು ಚಟುವಟಿಕೆಗಳ ಮೇಲೆ ಸಿಸಿಟಿವಿ ನಿಗಾ ಇರುವುದರಿಂದ ತಪ್ಪುಗಳು ಘಟಿಸುವುದಿಲ್ಲ' ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಈಶ್ವರ ಅವಟಿ.
http://www.prajavani.net
NEKRTC Nrupatunga Nagara Sarige
![]()