SkyscraperCity Forum banner
101 - 120 of 127 Posts

·
Registered
Joined
·
5,291 Posts
ಸಾರಿಗೆ ಅದಾಲತ್*: ಸಮಸ್ಯೆಗಳ ಸುರಿಮಳೆ!

ಗುಲ್ಬರ್ಗ: ನಗರದಲ್ಲಿ ಕ್ರೂಸರ್*ಗಳು ಮತ್ತು ನಗರ ಸಾರಿಗೆ ಬಸ್*ಗಳ ಓಡಾಟಕ್ಕೆ ಸಾರಿಗೆ ನಿಯಮಗಳನ್ನು ಅನ್ವಯಿಸುವುದಿಲ್ಲ. ಆದರೆ ಆಟೊಗಳಿಗೆ ಮಾತ್ರ ಕಾಯ್ದೆ ಅನ್ವಯಿಸಿ ತೊಂದರೆ ಕೊಡವುದನ್ನು ತಪ್ಪಿಸಬೇಕು ಎನ್ನುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಸಾರಿಗೆ ಅದಾಲತ್*ನಲ್ಲಿ ಕೇಳಿ, ಪರಿಹಾರ ಒದಗಿಸುವಂತೆ ಕೋರಿದರು.
ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಪ್ರಾದೇಶಿಕ ಸಾರಿಗೆ ವಿಭಾಗೀಯ ಕಚೇರಿಯ ಉಪಆಯುಕ್ತ ಶಿವರಾಜ್* ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಾರಿಗೆ ಅದಾಲತ್* ನಡೆಯಿತು. ರಸ್ತೆ ವಿಸ್ತರಣೆಯಾದ ಕಡೆ ಆಟೊ ನಿಲ್ದಾಣ ಕ್ಕಾಗಿ ಪ್ರತ್ಯೇಕ ಜಾಗ ತೋರಿಸಿಲ್ಲ. ಯಾವುದೇ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ.
ಬೀದಿ ದೀಪಗವಿಲ್ಲದ ರಸ್ತೆಗಳಲ್ಲಿ ನಿರ್ಮಿಸಿರುವ ರಸ್ತೆ ವಿಭಜಕಗಳಿಂದ ಅಪಘಾತಗಳು ನಡೆಯುತ್ತಿವೆ. ಅವುಗಳಿಗೆ ರೆಡಿಯಂ ಅಂಟಿಸಬೇಕು. ಈಚೆಗೆ ಕ್ರೂಸರ್* ವಾಹನಗಳು ರೈಲ್ವೆ ನಿಲ್ದಾಣದಿಂದಲೇ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಪ್ರತಿದಿನ ಟಂಟಂಗಳಲ್ಲಿ ಅತೀ ಭಾರವಾದ ಸರಕುಗಳ ಸಾಗಾಟವಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಟೊ ಚಾಲಕರ ಒಕ್ಕೂಟದ ಪ್ರತಿನಿಧಿ ದೂರಿದರು.
ಲಾರಿ ಟ್ರಾನ್ಸ್*ಪೋರ್ಟ್* ಏಜೆನ್ಸಿ ಎಂದು ನೋಂದಾಯಿಸಿಕೊಳ್ಳದೆ ಸರಕು ಸಾಗಣೆ ಗುತ್ತಿಗೆ ಪಡೆದು ಅನೇಕ ಲಾರಿಗಳು ಕಾರ್ಯನಿರ್ವಹಿ ಸುತ್ತಿವೆ. ಇದರಿಂದ ಒಂದೇ ಲಾರಿ ಇಟ್ಟುಕೊಂ ಡಿರುವ ಮಾಲೀಕರು ಏನು ಮಾಡಬೇಕು. ಗುಲ್ಬರ್ಗದಲ್ಲಿ ಲಾರಿ ಟ್ರಾನ್ಸ್*ಪೋರ್ಟ್* ಏಜೆನ್ಸಿಗೆ ಅನುಮತಿ ನೀಡಬೇಕು. ನೋಂದಾಯಿಸಿಕೊಳ್ಳದೆ ಸರಕು ಸಾಗಿಸುವ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲಾರಿ ಚಾಲಕರ ಸಂಘದ ಪ್ರತಿನಿಧಿ ಒತ್ತಾಯಿಸಿದರು.
ಬೈಕ್*, ಕಾರು ಮಾರಾಟದ ಶೋ ರೂಮ್* ಗಳಲ್ಲಿ ರಸ್ತೆ ತೆರಿಗೆ ಪಡೆಯುವುದರ ಜತೆ ಆರ್*ಟಿಒ ಹ್ಯಾಂಡ್ಲಿಂಗ್* ಚಾರ್ಜ್* ಎಂದು ವಸೂಲಿ ಮಾಡಲಾಗುತ್ತಿದೆ. ಇದು ನಿಯಮ ಬಾಹಿರವಾಗಿದ್ದರೆ, ಕೂಡಲೇ ಶೋ ರೂಮ್*ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಕೋರಿದರು.
ಆಟೊ ಖರೀದಿಯಾದ 18 ವರ್ಷದ ಬಳಿಕ ಬದಲಾಯಿಸಬೇಕು ಎನ್ನುವ ನಿಯಮವಿದೆ. ಹಳೆ ಆಟೊ ಬಿಟ್ಟು, ಹೊಸ ಆಟೊ ಖರೀದಿಸುವುದಕ್ಕೆ ಯಾವುದೇ ಬ್ಯಾಂಕ್*ಗಳು ಸಾಲ ನೀಡುತ್ತಿಲ್ಲ. ಸಾಲ ನೀಡುವುದಕ್ಕೆ ಏನಾದರೂ ವ್ಯವಸ್ಥೆ ಮಾಡಬೇಕು. ಗುಲ್ಬರ್ಗದಲ್ಲಿ ಈಚೆಗೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯು ಹೊಸ ಆಟೊಗಳಿಗೆ ಅನುಮತಿ ನೀಡುತ್ತಿಲ್ಲ. ಆದರೆ ನಗರ ಸಾರಿಗೆ ಬಸ್*ಗಳಿಗೆ ಏಕೆ ಅನುಮತಿ ನೀಡಲಾಗುತ್ತಿದೆ.
ಆಟೊದಲ್ಲಿ ನಾಲ್ಕು ಪ್ರಯಾಣಿಕರಿದ್ದರೆ ದಂಡ ವಿಧಿಸಲಾಗುತ್ತದೆ. ನಗರ ಸಾರಿಗೆ ಬಸ್*ಗಳಲ್ಲಿ ಪ್ರಯಾಣಿಕರು ಜೋತುಬಿದ್ದು ಪ್ರಯಾಣಿಸಿದರೂ ಕ್ರಮ ಕೈಗೊ ಳ್ಳುವುದಿಲ್ಲ. ಜನರಿಗೊಂದು ನಿಯಮ, ಸರ್ಕಾರಿ ಇಲಾಖೆಗೆ ಪ್ರತ್ಯೇಕ ನಿಯಮ ಅನುಸರಿಸುತ್ತಿರು ವುದೇಕೆ? ಶಾಲಾ ಮಕ್ಕಳು ಖಾಸಗಿ ವಾಹನಗಳಲ್ಲಿ ಶಾಲೆಗೆ ಹೋಗುತ್ತಿದ್ದು, ಕಡ್ಡಾಯವಾಗಿ ಶಾಲಾ ವಾಹನದಲ್ಲಿ ಪ್ರಯಾಣಿಸುವಂತೆ ಸೂಚಿಸಬೇಕು ಎಂದು ಅನೇಕರು ಪ್ರಶ್ನೆಗಳ ಮಳೆ ಸುರಿಸಿದರು.
ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾ ಡಿದ ಉಪ ಆಯುಕ್ತರು, ಕ್ರೂಸರ್*ಗಳು ಗುಲ್ಬರ್ಗ ರಿಂಗ್* ರಸ್ತೆಯಿಂದ ಒಳಗೆ ಓಡಾಡಬಾರದು ಎಂದು ಸೂಚಿಸಲಾಗಿತ್ತು. ರೈಲ್ವೆ ನಿಲ್ದಾಣ, ಬಸ್* ನಿಲ್ದಾಣ ಹಾಗೂ ಆಟೊ ನಿಲ್ದಾಣದ ಬಳಿ ಕ್ರೂಸರ್* ನಿಲ್ಲಿಸುವುದು ಕಾನೂನುಬಾಹಿರ. ನಿಯಮ ಉಲ್ಲಂಘಿಸುತ್ತಿರುವ ಕ್ರೂಸರ್*ಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗುಲ್ಬರ್ಗ ಪ್ರಭಾರ ಪ್ರಾದೇಶಿಕ ಸಾರಿಗೆ ಆಯುಕ್ತ ಖಾದರ್* ಪಾಷಾ ಅವರಿಗೆ ಸೂಚಿಸಿದರು.
ನಿಯಮ ಬಾಹಿರವಾಗಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿರುವ ಖಾಸಗಿ ವಾಹನಗಳನ್ನೆಲ್ಲ ವಶಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ವಾರದೊಳಗೆ ಆರಂಭಿಸಲಾಗುವುದು. ಆಟೊ ಚಾಲಕರಿಗೆ ಬೇಕಾಗುವ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಂತೆ ಮಹಾನಗರ ಪಾಲಿಕೆ, ಗುಲ್ಬರ್ಗ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗು ವುದು ಎಂದ ಅವರು, ಆರ್*ಟಿಒ ಕಚೇರಿಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಕಷ್ಟವಾಗಿತ್ತು. ಆಟೊ ಒಕ್ಕೂಟ ಶೌಚಾಲಯ ನಿರ್ವಹಣೆಗೆ ಮುಂದೆ ಬಂದಿರುವುದು ಸಂತೋಷದ ವಿಷಯ ಎಂದರು.
ಅದಾಲತ್*ನಲ್ಲಿ ಜನರು ತಿಳಿಸಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಮೂಲಕ ಮಾಡಲಾಗುವುದು. ಮುಂದೆ ನಡೆ ಯುವ ಸಾರಿಗೆ ಅದಾಲತ್*ನಲ್ಲಿ ಪಾಲಿಕೆ, ಜಿಡಿಎ ಹಾಗೂ ಪೊಲೀಸ್* ಇಲಾಖೆಯ ಪ್ರತಿನಿಧಿಯೊ ಬ್ಬರನ್ನು ಕಳುಹಿಸುವಂತೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರನ್ನು ಕೇಳಲಾಗುವುದು ಎಂದರು.
ಪ್ರಭಾರ ಪ್ರಾದೇಶಿಕ ಸಾರಿಗೆ ಆಯುಕ್ತ ಖಾದರ್* ಪಾಷಾ ಇದ್ದರು.


http://www.prajavani.net/article/ಸಾರಿಗೆ-ಅದಾಲತ್‌-ಸಮಸ್ಯೆಗಳ-ಸುರಿಮಳೆ
 

·
Registered
Joined
·
5,291 Posts
City Taxi Gulbarga

 
  • Like
Reactions: gulbargite

·
Registered
Joined
·
18 Posts
^^now with addition of these city taxis to the enormous number of autos(with reasonable fares as that of city buses) and effective number of "Nrupatunga" city buses of N.E.K.R.T.C., Gulbarga city transportation is throbbing to its peak...:cheers:
 

·
Registered
Joined
·
5,291 Posts
‘School buses, cabs must adhere to safety measures’

The Transport Department has initiated strong measures to regulate the operation of school buses and cabs and ensure that all safety measures prescribed by the government and the courts are strictly adhered to.


Deputy Commissioner of Transport Department Shivaraj Patil told The Hindu in Gulbarga on Thursday that Regional Transport Officers (RTOs) of all the six districts coming under the Gulbarga Revenue Division had issued directions to all the schools to submit the total number of buses used by them as school buses.


They have been asked to provide the details of the safety measures introduced by them as per the directions of the High Court and Supreme Court and subsequent notification issued by the State government.


The school buses, as per the notification issued by the government, should have a distinct highway yellow colour with a horizontal strip in green colour in the middle all around the vehicle and the words ‘School Cab’ prominently displayed on all four sides in white paint.


All the vehicles should be fitted with a speed governor at all times limiting the maximum speed to 40 km per hour.


Referring to the unauthorised use of cars, tempos and autorickshaws to transport the children, Mr. Patil said that instructions have been issued to the school authorities to persuade the owners of such vehicles to register with the RTO office as school cabs immediately and follow the security and safety provisions prescribed by the government.


“We have given a deadline of 15 days for the schools to persuade these vehicle owners to register with the RTO and now the process of seizing unauthorised vehicles used to transport children, without following any safety measures, will start,” he said.


http://www.thehindu.com/todays-pape...-adhere-to-safety-measures/article6451633.ece
 

·
Registered
Joined
·
5,291 Posts
Few changes in Jnnurm Buses :-

Gulbarga instead of 25 Premium segment buses now it will get 25 650mm MIDI non AC buses
Mysoreone: Can you please provide the source of this please ?
 

·
Registered
Joined
·
5,291 Posts
371 ಕಲಂ ಅಡಿ ನೇಮಕಾತಿಗೆ ಆಗ್ರಹ

ಗುಲ್ಬರ್ಗ: ಸಂವಿಧಾನದ 371 (ಜೆ) ನೇ ಕಲಂ ಅಡಿ ನೀಡಲಾಗಿರುವ ಮೀಸಲಾತಿಗೆ ಅನುಗುಣವಾಗಿ ಸಾರಿಗೆ ಸಂಸ್ಥೆಯಲ್ಲೂ ಹೈದರಾಬಾದ್ ಕರ್ನಾಟಕ ಪ್ರದೇಶದವರಿಗೆ ಮುಂಬಡ್ತಿ ನೀಡುವ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ವರ್ಕರ್ಸ್ ಫೆಡರೇಷನ್*ನ ಉಪಾಧ್ಯಕ್ಷ ಸಿದ್ಧಪ್ಪ ಪಾಲ್ಕಿ ಆಗ್ರಹಿಸಿದ್ದಾರೆ.

ಹೈ-ಕ ಪ್ರದೇಶದಲ್ಲಿ ನೇಮಕಾತಿ ಮಾಡಿಕೊಳ್ಳಬೇಕಾದರೆ ಅದಕ್ಕಾಗಿ ಇಲ್ಲಿಯವರಿಗೆ ಶೇ. 80 ರಷ್ಟು ಮತ್ತು ರಾಜ್ಯ ವೃಂದಲ್ಲಿ ಶೇ. 8 ರಷ್ಟು ಮೀಸಲಾತಿ ನೀಡುವಂತೆ ಸೂಚಿಸಲಾಗಿದೆ. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮೇಲ್ವಿಚಾರಕ ಮತ್ತು ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾರಿ ಮತ್ತು ಮುಂಬಡ್ತಿಗಳನ್ನು 371 (ಜೆ) ಕಲಂ ಅನ್ವಯ ಮಾಡಿಕೊಳ್ಳದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

2013 ನೇ ಸಾಲಿನಲ್ಲಿ ಮಾಡಿದಂತೆಯೇ ಈಗಲೂ ನೇಮಕಾತಿ ಮತ್ತು ಮುಂಬಡ್ತಿ ಮಾಡಲಾಗುತ್ತಿದ್ದು, ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗಮನ ಹರಿಸಿ ಸಂಬಂಧಪಟ್ಟ ಅಧಿಕಾರಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

http://vijaykarnataka.indiatimes.com/articleshow/44791997.cms
 

·
Registered
Joined
·
5,291 Posts
Gulbarga Bus Stand clicks by Dr Yaqoob 

·
Registered
Joined
·
5,291 Posts
ಐದು ಕಡೆ ಬಸ್ ತಂಗುದಾಣ; ರಿಂಗ್ ರಸ್ತೆ ಹೈಟೆಕ್ ರಂ&#32

ವಿಜಯಕುಮಾರ ಬೆಲ್ದೆ ಕಲಬುರಗಿ:ನಗರದ ಹೊರವಲಯದ ಹುಮನಾಬಾದ್ ಬೈಪಾಸ್*ನಿಂದ ಖರ್ಗೆ ಪೆಟ್ರೋಲ್ ಬಂಕ್*ವರೆಗೆ ಐದು ಹೈಟೆಕ್ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿದೆ. ಇದರಿಂದ ಬಹುದಿನಗಳಿಂದ ಬಸ್ ನಿಲ್ದಾಣ ಇಲ್ಲದ ಕಾರಣ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಪ್ರಯಾಣಿಕರಿಗೆ ನೆಮ್ಮದಿ ನೀಡಿದಂತಾಗಿದೆ.

ಈಶಾನ್ಯ ಸಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನಗರದ ಹುಮನಾಬಾದ್ ಕ್ರಾಸ್, ಕೆಸಿಟಿ ಕಾಲೇಜು ಎದುರು, ಹಾಗರಗಾ ಕ್ರಾಸ್, ಟಿಪ್ಪು ಸುಲ್ತಾನ್ ಚೌಕ್, ಗಣೇಶ ಚೌಕ್ ಹತ್ತಿರ ಬಸ್ ತಂಗುದಾಣ ನಿರ್ಮಿಸಲಾಗಿದೆ. ಈ ವ್ಯಾಪ್ತಿಯ ಸಾರ್ವಜನಿಕರು, ಪ್ರಯಾಣಿಕರು ಬಸ್ ಹಿಡಿಯಲು ಅನುಕೂಲ ಆಗಿದೆ.

ರಿಂಗ್ ರಸ್ತೆಯ ಬದಿ ಕಬ್ಬಿಣದ ಸಲಾಕೆಯಿಂದ (ಸೆಲ್ಟರ್) ಶೆಟ್ ಅಳವಡಿಸಲಾಗಿದೆ. ಅದರ ಮೇಲೆ ಪತ್ರಗಳು (ಟೀನ್) ಹಾಕಲಾಗಿದೆ. ನೆಲದ ಮೇಲೆ ಫ್ಲೋರಿಂಗ್ ಹಾಕಲಾಗಿದೆ.ಪ್ರಯಾಣಿಕರು ರಸ್ತೆಗೆ ಬರದಂತೆ ಸೆಲ್ಟರ್ ಎದುರು ಸ್ಟೀಲ್ ಹೈಂಡಲ್ ಕೂಡಿಸಲಾಗಿದೆ.ಪ್ರಯಾಣಿಕರಿಗೆ ಕುಳಿತು ಕೊಳ್ಳಲು 12 ಕಬ್ಬಿಣದ ಕುರ್ಚಿಗಳನ್ನು ಹಾಕಲಾಗಿದೆ.

ಐದು ಕಡೆಯ ಪ್ರದೇಶದಿಂದ ಸಿಟಿ ಮತ್ತು ಪ್ರವಾಸಕ್ಕಾಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬರುವ ಸಾರ್ವಜನಿಕರು ನೃಪತುಂಗ (ಕೆಂಪು) ಬಸ್*ಗಾಗಿ ಕಾಯಲು ಈ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ಸಂಸ್ಥೆಯ ಈ ವ್ಯವಸ್ಥೆಯಿಂದ ಈ ಮಾರ್ಗದಲ್ಲಿ ತಿರುಗಾಡುವ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಸರಕಾರಿ ಮತ್ತು ಖಾಸಗಿ ನೌಕರರು ಖುಷಿ ಪಟ್ಟು ಸಂಸ್ಥೆಯ ಕಾರ್ಯಕ್ಕೆ ಥ್ಯಾಕ್ಸ್ ಹೇಳಿದ್ದಾರೆ.

ಈ ವ್ಯಾಪ್ತಿಯಿಂದ ಸಾವಿರಾರು ಜನ ನಗರ ಅಲ್ಲದೇ ದೂರದ ನಗರ ಮತ್ತು ಪಟ್ಟಣಗಳಿಗೆ ತೆರಳಲು ಕೇಂದ್ರ ಬಸ್ ನಿಲ್ದಾಣ ಹಾಗೂ ಉದ್ಯೋ ಗಕ್ಕಾಗಿ ತೆರಳು ನೌಕರರು, ಕೂಲಿಕಾರ್ಮಿಕರು ಬಸ್*ಗಾಗಿ ರಸ್ತೆಯ ಬದಿ ಗಂಟೆಗಟ್ಟಲೇ ನಿಂತುಕೊಂಡು ಕಾಯುವ ಪರಿಸ್ಥಿತಿ ಇತ್ತು. ಈ ಬಗ್ಗೆ ನಿ ವಾಸಿಗಳು, ಪ್ರಯಾಣಿಕರು ಬಸ್ ತಂಗುದಾಣ ನಿರ್ಮಾಣಕ್ಕಾಗಿ ಮಹಾನಗರ ಪಾಲಿಕೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗೆ ಮನವಿ ಪತ್ರ ಸಲ್ಲಿಸಿ ಒತ್ತಡ ಹೇರಿದ್ದರು.

ಹುಮನಾಬಾದ್ ರಿಂಗ್ ರಸ್ತೆಯಿಂದ ಖರ್ಗೆ ಪೆಟ್ರೋಲ್ ಬಂಕ್ ಮಧ್ಯೆ ನಿತ್ಯ ಸಾವಿರಾರು ವಾಹನಗಳು ತಿರುಗಾಡುತ್ತವೆ. ಅಲ್ಲದೇ ಜನದಟ್ಟ ಣೆಯೂ ಇದೆ. ಈಶಾನ್ಯ ಸಾರಿಗೆ ಸಂಸ್ಥೆಯ ಸಿಟಿ ಬಸ್*ಗಳು ಸಹ ಸಂಚರಿಸುತ್ತಿವೆ. ಆದರೆ ಬಸ್*ಗಾಗಿ ಕಾಯ್ದು ಕುಳಿತುಕೊಳ್ಳಲು ಸೂಕ್ತ ಸ್ಥಳ (ಬಸ್ ತಂಗುದಾಣ) ಇಲ್ಲದಿದ್ದರಿಂದ ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಸ್*ಗಳು ನಿಲ್ಲುಸುತ್ತಿದ್ದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿತ್ತು.

ರಿಂಗ್ ರಸ್ತೆಯಲ್ಲಿ ಬಸ್ ತಂಗುದಾಣವಿಲ್ಲದೆ ಸರಕಾರಿ, ಖಾಸಗಿ ನೌಕರರು, ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರು ಹಾಗೂ ಪ್ರಯಾಣಿಕರು ಬಿಸಿಲು, ಮಳೆಯಲ್ಲಿ ನಿಲ್ಲಬೇಕಾಗಿದೆ. ಆದ್ದರಿಂದ ಈ ಪ್ರದೇಶಗಳಲ್ಲಿ ಬಸ್ ತಂಗುದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ನಾಗರಿಕರು ಒತ್ತಾಯ ಮಾಡಿದ್ದರು.

ಹಾಗರಗಾ ಕ್ರಾಸ್ ಬಳಿ ಬಸ್ ತಂಗುದಾಣ ವ್ಯವಸ್ಥೆ ಇಲ್ಲದಿದ್ದರಿಂದ ಹಾಗರಗಾ, ನಿಪ್ಪಾಣಿ, ಮಾಲಗತ್ತಿ, ಖಾಜಾ ಕೊಟನೂರ, ಇಟಗಾ, ಕಾಳಗಿ, ಹೆಬ್ಬಾಳಚಿಂಚೋಳಿ ಇತರೆ ನಾನಾ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು, ಸಾರ್ವಜನಿಕರು ಬಸ್*ಗಾಗಿ ಕಾಯಲು ಸೂಕ್ತ ಜಾಗ ಇಲ್ಲದಿದ್ದರಿಂದ ರಸ್ತೆಯ ಬದಿ ಇರುವ ಹೋಟೆಲ್, ಇತರೆ ಅಂಗಡಿಗಳ ಆಸರೆ ಪಡೆಯುವಂತಾಗಿತ್ತು.

ಸಾರ್ವಜನಿಕರ ಹಿತದೃಷ್ಟಿಯಿಂದ ಮಳೆ, ಬಿಸಿಲು ಇತರೆ ಯಾವುದೇ ತೊಂದರೆಯಾಗದಂತೆ ಮತ್ತು ಸಾರಿಗೆ ಸಂಸ್ಥೆಯ ಬಸ್*ಗಾಗಿ ಕಾಯಲು ಬಸ್ ತಂಗುದಾಣ ನಿರ್ಮಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. -ಎನ್. ಶಿವಮೂರ್ತಿ, ವ್ಯವಸ್ಥಾಪಕ ನಿರ್ದೇಶಕರು, ಈಶಾನ್ಯ ಸಾರಿಗೆ ಸಂಸ್ಥೆ ಕಲಬುರಗಿ.

ಹಾಗರಗಾ ಕ್ರಾಸ್ ಬಳಿ ಬಸ್ ತಂಗುದಾಣ ಇಲ್ಲದಿದ್ದರಿಂದ ಜನತೆ ನಿತ್ಯ ನರಕಯಾತನೆ ಅನುಭವಿಸುತ್ತಿದ್ದರು. ಈ ಬಗ್ಗೆ ಜನಪ್ರತಿನಿಧಿ, ಶಾಸಕ ಹಾಗೂ ಮಹಾನಗರ ಪಾಲಿಕೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸಿ ಈಶಾನ್ಯ ಸಾರಿಗೆ ಸಂಸ್ಥೆ ತಂಗುದಾಣ ವ್ಯವಸ್ಥೆ ಮಾಡಿರುವುದು ಸಂತಸ ತಂದಿದೆ. -ಸಾಜೀದ್ ಅಲಿ ರಂಜೋಳವಿ, ಹಾಗರಗಾ ನಿವಾಸಿ.

ಸಾರ್ವಜನಿಕ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಈಶಾನ್ಯ ಸಾರಿಗೆ ಸಂಸ್ಥೆಯು ಬಸ್ ತಂಗುದಾಣ ನಿರ್ಮಾಣ ಮಾಡಿರುವುದು ಸ್ವಾಗತಾ ರ್ಹ. ಇದನ್ನು ಹಾಳು ಮಾಡದೇ ಸ್ವಚ್ಛತೆ ಕಾಪಾಡಬೇಕು. -ಮಖಬೂಲ್ ಅಹ್ಮದ್ ಸಗ್ರಿ, ಪ್ರಯಾಣಿಕ.

http://vijaykarnataka.indiatimes.com/articleshow/45823327.cms
_______________________________________________________________

After building hitech bus stops inside city now NEKRTC have built similar across ring road in major junction in Gulbarga... well done NEKRTC...:cheers:
 

·
Registered
Joined
·
5,291 Posts
New bill will only choke public transport system: Minister

Transport Minister Ramalinga Reddy has said that the proposed Road Transport and Safety Bill, 2014 would choke the public sector transport corporation and open up avenues for the private transport operators.
Talking to presspersons in Kalaburagi after inspecting the Electronic Driving Test Track laying work and the construction of a community hall of the NEKRTC here on Thursday, he said that the State government was totally opposed to the provisions of the bill. The unilateral decision of the Union government to introduce the bill without consulting the State government would be opposed tooth and nail, he said.
Mr. Reddy said that the new bill would curtail the power of the State government in operating the transport corporations and even for introducing new buses as well as selecting the routes. The transport corporations would have to seek the approval of the National Transport Authority, he said.
He said that apart from Karnataka, other States including Tamil Nadu, Kerala, Telangana and Andhra Pradesh were also opposed to the bill.
The objective to set up an electronic driving test track was to reduce the human interference and make the process more transparent by providing online registration of vehicles and issuing online driving license.
The electronic driving test track was established in 4.2 acres of land at an estimated at cost of Rs 4.15 crore, Mr. Reddy said.
New RTO
To a question, Mr. Reddy said that the government has decided to concede the long-pending demand for sanctioning one more Regional Transport Office at Sedam in Kalaburagi.
Along with Sedam, Chincholi and Chitapur taluks were likely to be brought under the jurisdiction of the new RTO, he said.
Mr. Reddy said that to further improve road transport facilities to rural areas in the Hyderabad-Karnataka region, the government has sanctioned 329 medium sized buses under the Jawaharlal Nehru National Urban Renewal Mission. Out of the 329 new medium-sized buses sanctioned, 100 buses would be operating in the Kalaburagi district.
Vacant posts
The Karnataka State Road Transportation Corporation would recruit for 3,093 vacant posts including drivers, conductors and mechanics to extend transportation facilities. The corporation would also fill up 954 posts including Junior Assistant Engineers, Clerks and Security Guards through CET examinations.
‘Bill will curtail the power of the State govt. in operating the transport corporations’
‘One more RTO will be established at Sedam in Kalaburagi’http://www.thehindu.com/news/nation...-transport-system-minister/article6814007.ece
__________________________________________________
New RTO at Sedam, NEKRTC to get 329 new buses of which 100 will be in Gulbaga district :cheers:
 

·
Registered
Joined
·
5,291 Posts
Jewargi Bus Stand by NEKRTC

 

·
Registered
Joined
·
5,291 Posts
NEKRTC New Batch of City Buses at Gulbarga

 
  • Like
Reactions: prince02

·
Registered
Joined
·
5,291 Posts
Gulbarga- Bangalore Beatuty by NEKRTC
PIC: Deepak srinivas
 

·
Registered
Joined
·
1,464 Posts
ಮುಖ ಕನ್ನಡಿಯಲ್ಲಿ; ವೇಗವಿರಲಿ ನಿಮ್ಮ ಕೈಯಲ್ಲಿ!

ಕಲಬುರಗಿ: ಎರಡು ರಸ್ತೆಗಳು ಹಾಗೂ ನಾಲ್ಕು ರಸ್ತೆಗಳು ಕೂಡುವ ರಸ್ತೆಯಲ್ಲಿ ಒಂದು ಕಡೆಯಿಂದ ಬರುವ ವಾಹನ ಇನ್ನೊಂದು ಕಡೆಯಿಂದ ಬರುವವರಿಗೆ ಗೊತ್ತಾಗಲಿ. ಈ ಮೂಲಕ ತಮ್ಮ ವಾಹನದ ವೇಗ ನಿಯಂತ್ರಿಸಿಕೊಂಡು ಸುರಕ್ಷಿತವಾಗಿ ವಾಹನ ಚಲಾಯಿಸಲಿ ಎಂಬ ಸದುದ್ದೇಶದಿಂದ ನಗರದ ಪ್ರಮುಖ ವೃತ್ತಗಳಲ್ಲಿ 'ಕಾನ್*ವೆಕ್ಸ್ ಮಿರರ್'ಗಳನ್ನು ಅಳವಡಿಸಲಾಗುತ್ತಿದೆ.

ಎಚ್*ಕೆಆರ್*ಡಿಬಿಯ ಸ್ಮಾರ್ಟ್ ಪೊಲೀಸ್ ಯೋಜನೆಯಲ್ಲಿನ ಅನುದಾನದಿಂದ ಕಾನ್*ವೆಕ್ಸ್ ಮಿರರ್*ಗಳನ್ನು ಖರೀದಿಸಲಾಗಿದ್ದು, 24 ವೃತ್ತಗಳಲ್ಲಿ ಇವುಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ವೃತ್ತಗಳನ್ನು ಗುರುತಿಸಲಾಗಿದ್ದು, ಕಾನ್*ವೆಕ್ಸ್ ಮಿರರ್*ಗಳು ಅಳವಡಿಸುವ ಕಾರ್ಯ ಬುಧವಾರದಿಂದ ಆರಂಭವಾಗಿದೆ.

ವೃತ್ತಗಳಲ್ಲಿ ಅಳವಡಿಸಲಾಗುತ್ತಿರುವ ಕಾನ್*ವೆಕ್ಸ್ ಮಿರರ್*ಗಳಿಂದ ವಾಹನ ಸವಾರರಿಗೆ ತಮ್ಮ ಹಿಂದುಗಡೆ ಬರುತ್ತಿರುವ ಹಾಗೂ ಎಡಗಡೆ ಹಾಗೂ ಬಲಗಡೆ ಮಾರ್ಗದಿಂದ ಬರುತ್ತಿರುವ ವಾಹನಗಳ್ಯಾವುವು..?, ಅವುಗಳು ಎಷ್ಟು ವೇಗದಲ್ಲಿವೇ...? ನಾವು ಹೇಗೆ ಸಾಗಬೇಕು ಎಂಬುದು ಸೇರಿದಂತೆ ಎಲ್ಲವನ್ನು ಈ ಕಾನ್*ವೆಕ್ಸ್ ಕನ್ನಡಿಗಳಿಂದ ಕಾಣಬಹುದಾಗಿದೆ. ಈ ಮೂಲಕ ತಮ್ಮ ವಾಹನಗಳನ್ನು ಸುರಕ್ಷಿತವಾಗಿ ಚಲಾಯಿಸಲು ಅನುಕೂಲವಾಗಲಿದೆ ಎನ್ನುತ್ತಾರೆ ಟ್ರಾಫಿಕ್ ಸಿಪಿಐ ಡಿ.ಟಿ.ಪ್ರಭು.

ಕಾನ್*ವೆಕ್ಸ್ ಮಿರರ್*ಗಳು ಹಗಲಿನಲ್ಲಿ ಸವಾರರಿಗೆ ಬಹಳಷ್ಟು ಸಹಕಾರಿಯಾಗಿದೆ. ಇವುಗಳ ಅಳವಡಿಕೆಯಿಂದ ವೃತ್ತಗಳಲ್ಲಿ ಸಾಧ್ಯವಾದಷ್ಟು ಅಪಘಾತಗಳು ಕಡಿಮೆಯಾಗಲಿವೆ ಎಂದು ಅವರು ಹೇಳುತ್ತಾರೆ.

*ಎಲ್ಲೆಲ್ಲಿ...?: ಮಿನಿವಿಧಾನಸೌಧ, ಹಳೆ ಎಸ್*ಪಿ ಕಚೇರಿ, ಸರಕಾರಿ ಆಸ್ಪತ್ರೆ ವೃತ್ತ, ಡಿಆರ್ ಮೇನ್*ಗೇಟ್, ಐವಾನ್*ಶಾಹಿ, ವೆಂಕಟೇಶ್ವರ ನಗರ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಆನಂದ ಹೋಟಲ್ ಸರ್ಕಲ್, ಗೋವಾ ಹೋಟಲ್ ಸರ್ಕಲ್, ಲಾಳಗೇರಿ ಕ್ರಾಸ್ ಸೇರಿದಂತೆ ನಗರದ 24 ವೃತ್ತಗಳಲ್ಲಿ ಈ ಕಾನ್*ವೆಕ್ಸ್ ಮಿರರ್*ಗಳನ್ನು ಅಳವಡಿಸಲಾಗುತ್ತದೆ.

ಅಪಘಾತಗಳನ್ನು ತಡೆಗಟ್ಟುವ, ಸುರಕ್ಷಿತವಾಗಿ ವಾಹನ ಚಲಾಯಿಸುವುದಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 24 ವೃತ್ತಗಳಲ್ಲಿ ಕಾನ್*ವೆಕ್ಸ್ ಮಿರರ್*ಗಳನ್ನು ಅಳವಡಿಸಲಾಗುತ್ತಿದೆ. ಸವಾರರು ತಮ್ಮ ಹಿಂಬದಿ ಮತ್ತು ಎಡ,ಬಲ ಮಾರ್ಗದಿಂದ ಬರುವ ವಾಹನಗಳನ್ನು ಈ ಕನ್ನಡಿಯಿಂದ ನೋಡಿಕೊಂಡು ವಾಹನ ಚಲಾಯಿಸಬಹುದು. ಈ ಕಾನ್*ವೆಕ್ಸ್ ಮಿರರ್*ಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಅಂದಾಗ ಮಾತ್ರ ಈ ಮಿರರ್*ಗಳನ್ನು ನೋಡಿಕೊಂಡು ವಾಹನ ಚಲಾಯಿಸುವರು. ಒಟ್ಟಿನಲ್ಲಿ ಈಜೀ ಮೂಮೆಂಟ್*ಗೆ ಈ ಕನ್ನಡಿಗಳು ಸಹಕಾರಿ.

-ಡಿ.ಟಿ.ಪ್ರಭು, ಟ್ರಾಫಿಕ್ ಸಿಪಿಐ ಕಲಬುರಗಿ

http://vijaykarnataka.indiatimes.co...irali-nimma-kaiyalli/articleshow/47629221.cms
 

·
Registered
Joined
·
1,464 Posts
NEKRTC buses stop levying luggage charge for migrants; Shettar criticises move

Opposition says move will encourage migration


As people are migrating out of Hyderabad Karnataka in hordes, the North-eastern Karnataka Road Transport Corporation (NEKRTC) has stopped levying luggage charge for passengers travelling in its buses. This will be in force in April, May and June.


The NEKRTC is describing this as a “welfare measure” to help people in distress and prevent private operators from using the situation to make money.


Leader of the Opposition Jagadish Shettar, however, alleged that the State government was, through this measure, encouraging village residents to migrate to southern parts of Karnataka and outside the State.


NEKRTC managing director H.S. Ashokananda told The Hindu that the transport corporation had decided not to collect luggage charge from passengers to enable them to transport essential items during migration to Bengaluru, Mumbai, Hyderabad, Goa and other places during summer.


http://www.thehindu.com/news/cities/...cle8521289.ece
 

·
Registered
Joined
·
1,464 Posts
1.20 ಲಕ್ಷ ಪ್ರತಿದಿನ ಬಸ್*ನಲ್ಲಿ ಸಂಚರಿಸುವ ಪ್ರಯಾಣ&a

ಕಲಬುರ್ಗಿಯ ನೃಪತುಂಗ ಸಾರಿಗೆ ಬಸ್*ನಲ್ಲಿ ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ಕೊಡುತ್ತಿರುವುದು.
ಕಲಬುರ್ಗಿ: ಸಾರ್ವಜನಿಕರ ಮೆಚ್ಚುಗೆ ಗಳಿಸಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ‘ನೃಪತುಂಗ’ ಸಾರಿಗೆ ನಷ್ಟದಲ್ಲಿದ್ದರೂ ಇತರೆ ದೂರದ ಮಾರ್ಗಗಳಿಂದ ಸಂದಾಯವಾಗುವ ಆದಾಯದೊಂದಿಗೆ ಹೊಂದಾಣಿಕೆ ಮೂಲಕ ಉತ್ತಮ ಸೇವೆ ಒದಗಿಸುತ್ತಿದೆ.


ಕಲಬುರ್ಗಿ ಕೇಂದ್ರ ಸ್ಥಾನವಾದ್ದರಿಂದ ಇಲ್ಲಿಗೆ ಪ್ರತಿದಿನ ಸಾವಿರಾರು ಜನ ವಿವಿಧ ಕಾರ್ಯಗಳ ನಿಮಿತ್ತ ಬರುತ್ತಾರೆ. ನಗರ ಸಾರಿಗೆ ಬಸ್*ಗಳಲ್ಲಿ ₹3 ಯಿಂದ ₹12ರ ವರೆಗೆ ಟಿಕೆಟ್* ದರ ಇದೆ. 88 ನೃಪತುಂಗ ಸಾರಿಗೆ ಬಸ್*ಗಳು ನಗರದಲ್ಲಿ ಪ್ರತಿದಿನ 15 ಸಾವಿರ ಕಿಲೊಮೀಟರ್* ಕಾರ್ಯ ನಿರ್ವಹಿಸುತ್ತಿವೆ. 1 ಲಕ್ಷಕ್ಕೂ ಮೇಲ್ಪಟ್ಟು ಜನರು ಪ್ರಯಾಣಿಸುತ್ತಾರೆ. ಇವರಿಂದ ಪ್ರತಿದಿನ ಅಂದಾಜು ₹4.24 ಲಕ್ಷ ಆದಾಯ ಸಂದಾಯವಾಗುತ್ತಿದೆ.
‘ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿಯೂ ಇಲ್ಲ. ಇತ್ತ ಲಾಭದಲ್ಲಿಯೂ ಇಲ್ಲ. ಇಲ್ಲಿ ಒಂದೆಡೆ ಆದ ನಷ್ಟವನ್ನು ಮತ್ತೊಂದು ಘಟಕದಿಂದ ಹೊಂದಾಣಿಕೆ ಮಾಡಲಾಗುತ್ತಿದೆ. ಕಾಲಕ್ಕೆ ತಕ್ಕಂತೆ (ಸೀಜನ್* ವೈಸ್*) ಬಸ್*ಗಳ ಆದಾಯ ಇರುತ್ತದೆ. ಪ್ರಯಾಣಿಕರಿಗೆ ಉತ್ತಮ ಸೇವೆ ಮತ್ತು ಅವರ ಸುರಕ್ಷತೆ ಮುಖ್ಯ’ ಎಂದು ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಸಾಲಿ ಹೇಳುತ್ತಾರೆ.
‘ನಗರ ಸಾರಿಗೆ ಬಸ್*ಗಳಲ್ಲಿ ಪ್ರಯಾಣ ದರ ಸದ್ಯದ ಮಟ್ಟಿಗೆ ಪರಿಷ್ಕರಣೆ ಇಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್*ಗಳು ಬರುವ ನಿರೀಕ್ಷೆ ಇದೆ’ ಎಂದು ತಿಳಿಸುತ್ತಾರೆ ಸಂಚಾರ ವ್ಯವಸ್ಥಾಪಕ ನಿರ್ದೇಶಕ ಪ್ರಭುದಾಸ್*.
ಪಾಸ್*ಗಳ ಬಗ್ಗೆ ಅರಿವಿನ ಕೊರತೆ: ಸಾರಿಗೆ ಬಸ್*ಗಳಲ್ಲಿ ಅಂಗವಿಕಲರು, ಅಂಧರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರಿಗಾಗಿ ರಿಯಾಯಿತಿ ದರದಲ್ಲಿ ಪಾಸ್* ನೀಡುವ ವ್ಯವಸ್ಥೆ ಇದೆ. ನಗರ ಸಾರಿಗೆ ಬಸ್*ನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕರ ಅನುಕೂಲಕ್ಕಾಗಿ ₹30ಗೆ ದಿನದ ಪಾಸ್* ನೀಡಲಾಗುತ್ತಿದೆ. ಆದರೆ, ಇದರ ಬಗ್ಗೆ ಅರಿವಿನ ಕೊರತೆ ಕಾರಣ ಹೆಚ್ಚು ಪಾಸ್* ಮಾರಾಟವಾಗುತ್ತಿಲ್ಲ. ಪ್ರತಿದಿನಕ್ಕೆ ಸರಾಸರಿ 200 ಪಾಸ್*ಗಳು ಮಾರಾಟವಾಗುತ್ತಿವೆ.
‘ನೃಪತುಂಗದಲ್ಲಿ ₹30ಗೆ ದಿನದ ಪಾಸ್* ಕೊಡುತ್ತಾರೆ ಎಂದು ನನ್ನ ಗೆಳೆಯ ಹೇಳಿದ್ದ. ಇದರಿಂದ ಕಲಬುರ್ಗಿಯ ಪ್ರವಾಸಿ ತಾಣಗಳಾದ ಶರಣಬಸವೇಶ್ವರ ದೇವಸ್ಥಾನ, ಅಪ್ಪನ ಕೆರೆ, ಖಾಜಾ ಬಂದೇನವಾಜ್* ದರ್ಗಾ, ಕೋಟೆ, ಕೋರಂಟಿ ಹನುಮಾನ ದೇವಸ್ಥಾನ, ಬುದ್ಧ ವಿಹಾರ, ಕಿರು ಮೃಗಾಲಯ, ವಿಜ್ಞಾನ ಕೇಂದ್ರಗಳನ್ನು ಕೇವಲ ₹30ನಲ್ಲಿ ವೀಕ್ಷಿಸಲು ಸಾಧ್ಯವಾಯಿತು. ಇತರೆ ವಾಹನಗಳಲ್ಲಿ ಸಂಚಾರ ಮಾಡಿದರೆ, ₹300–400 ಖರ್ಚಾಗುತ್ತಿತ್ತು. ದಿನದ ಪಾಸ್* ಸ್ಥಗಿತಗೊಳಿಸಬಾರದು’ ಎಂದು ವಿನಂತಿಸುತ್ತಾರೆ ಚಿತ್ತಾಪುರದ ಭೀಮಾಶಂಕರ.
ನೃಪತುಂಗ ಸಂಚಾರಕ್ಕೆ ಅನಾನುಕೂಲ: ನಗರದಲ್ಲಿ ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ 2 ಕಿಲೊಮೀಟರ್*ಗೆ ಒಂದರಂತೆ ಮತ್ತು ಮುಖ್ಯ ಸ್ಥಳಗಳಲ್ಲಿ ನೃಪತುಂಗ ಸಾರಿಗೆ ಬಸ್* ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಇತರೆ ವಾಹನಗಳು ಅಲ್ಲಿ ನಿಲುಗಡೆ ಮಾಡುವುದರಿಂದ ಮಹಿಳೆಯರು, ಮಕ್ಕಳು, ವೃದ್ಧರಿಗೆ ತೊಂದರೆಯಾಗುತ್ತಿದೆ.
‘ನಗರದ ಹುಮನಾಬಾದ್* ರಿಂಗ್* ರಸ್ತೆ ಕ್ರಾಸ್*, ಖಾಜಾ ಬಂದೇನವಾಜ್* ದರ್ಗಾ ಇನ್ನಿತರೆಡೆ ಬಸ್*ಗಳ ಸುಲಭ ಸಂಚಾರಕ್ಕೆ ಆಟೊ ಚಾಲಕರು ಬಿಡುವುದಿಲ್ಲ. ಅವರ ಜೊತೆ ವಾಗ್ವಾದ ನಡೆಯುವುದು ಉಂಟು. ಈ ಬಗ್ಗೆ ಆರ್*ಟಿಒ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡುತ್ತಾರೆ ಹೆಸರು ಹೇಳಲು ಇಚ್ಛಿಸದ ನೃಪತುಂಗ ಸಾರಿಗೆ ಬಸ್* ಚಾಲಕ ಮತ್ತು ನಿರ್ವಾಹಕರು.
** *** **
ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ಸಾರಿಗೆ ಸಂಸ್ಥೆ ಯ ಬಸ್*ಗಳಲ್ಲಿ ಪ್ರಯಾಣಿಸಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಪಾಸ್*ಗಳನ್ನು ನೀಡಲಾಗುತ್ತಿದೆ.
-ಭೀಮಣ್ಣ ಸಾಲಿ,
ಅಧ್ಯಕ್ಷರು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
 
101 - 120 of 127 Posts
Top