SkyscraperCity Forum banner
101 - 108 of 108 Posts

·
Registered
Joined
·
1,464 Posts
ಇಂಗ್ಲಿಷ್*ನಲ್ಲಿ ಪ್ರೌಢಿಮೆ ಬೆಳೆಸಲು ‘ಭಾಷಾ ಪ್&#3248

ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಬಳಿ ಇರುವ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಒಂದು ಕೊಠಡಿಯಲ್ಲಿ ಈ ಪ್ರಯೋಗಾಲಯ ಸ್ಥಾಪನೆಯಾಗಲಿದೆಕಲಬುರ್ಗಿ: ಹೈದರಾಬಾದ್* ಕರ್ನಾಟಕ ಪ್ರದೇಶದ ಶಿಕ್ಷಕರಲ್ಲಿ ಇಂಗ್ಲಿಷ್* ಭಾಷೆಯ ಪ್ರೌಢಿಮೆ ಬೆಳೆಸಿ, ಆ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲು ಇಲ್ಲಿಯ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಭಾಷಾ ಪ್ರಯೋಗಾಲಯ’ ಸ್ಥಾಪಿಸಲಾಗುತ್ತಿದೆ.

ಹೈದರಾಬಾದ್* ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್*ಕೆಆರ್*ಡಿಬಿ) ಇದಕ್ಕೆ ₹33.50 ಲಕ್ಷ ಅನುದಾನ ನೀಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರಸಕ್ತ ಸಾಲಿನ ಜೂನ್*ನಿಂದ ಈ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ.

ಇಲ್ಲಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಬಳಿ ಇರುವ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಒಂದು ಕೊಠಡಿಯಲ್ಲಿ ಈ ಪ್ರಯೋಗಾಲಯ ಸ್ಥಾಪನೆಯಾಗಲಿದೆ. ಕೊಠಡಿ ನವೀ*ಕರಣ, ಅಗತ್ಯ ಉಪಕರಣ ಅಳ*ವ*ಡಿಕೆಯ ಕಾಮಗಾರಿಯನ್ನು ಕಲಬುರ್ಗಿ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಕಾಮ*ಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಹೈದರಾಬಾದ್* ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 25 ಕಂಪ್ಯೂಟರ್**ಗಳನ್ನು ನೀಡಲಿದೆ. ಬೆಂಗಳೂರಿನಲ್ಲಿರುವ ಪ್ರಾದೇಶಿಕ ಇಂಗ್ಲಿಷ್* ಸಂಸ್ಥೆ ಬಳಸುತ್ತಿರುವ ಸಾಫ್ಟ್*ವೇರ್* ಅನ್ನೇ ಖರೀದಿಸಿ, ಇಲ್ಲಿ ಅಳವಡಿಸಲಾಗುವುದು. ಈ ಸಾಫ್ಟ್*ವೇರ್*ನ್ನು ‘ಬ್ರಿಟಿಷ್* ಕೌನ್ಸಿಲ್* ಆಫ್* ಇಂಡಿಯಾ’ ಅಭಿವೃದ್ಧಿ ಪಡಿಸಿದೆ. ಈ ಪ್ರಯೋಗಾಲಯಕ್ಕೆ ಅಂತರ್ಜಾಲ ಮತ್ತು ವೈಫೈ ಸೌಲಭ್ಯ ಕಲ್ಪಿಸಲಾಗುವುದು. ಇಲ್ಲಿ ತರಬೇತುದಾರರು ಇರಲಿದ್ದಾರೆ.

‘ನಮ್ಮ ಶಿಕ್ಷಕರಲ್ಲಿ ಇಂಗ್ಲಿಷ್* ಜ್ಞಾನದ ಕೊರತೆ ಇಲ್ಲ. ಆದರೆ, ಸ್ಪಷ್ಟ ಉಚ್ಚಾರಣೆ ಸಮಸ್ಯೆ ಇದೆ. ಶಿಕ್ಷಕರು ಪದಗಳನ್ನು ಸ್ಪಷ್ಟವಾಗಿ ಉಚ್ಚಾರ ಮಾಡಿದರೆ ವಿದ್ಯಾರ್ಥಿ*ಗಳು ಅದನ್ನು ಅನುಸರಿಸು*ತ್ತಾರೆ. ಉಚ್ಚಾರಣೆ ಸರಿಯಾಗಿದ್ದರೆ ಆ ಪದಗಳ ಸ್ಪೆಲ್ಲಿಂಗ್* ಕಂಠಪಾಠ ಮಾಡುವ ಅವಶ್ಯಕತೆ ಅಷ್ಟಾಗಿ ಇರುವುಲ್ಲ. ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಮಕ್ಕಳಲ್ಲಿ ಇಂಗ್ಲಿಷ್* ಕಲಿಕಾ ಮಟ್ಟ ಹೆಚ್ಚಿಸುವುದು ಈ ಭಾಷಾ ಪ್ರಯೋಗಾಲಯ ಸ್ಥಾಪಿಸುವ ಮುಖ್ಯ ಉದ್ದೇಶ’ ಎನ್ನುವುದು ಹೈದರಾ*ಬಾದ್* ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಶೈಕ್ಷಣಿಕ ಸಲಹೆಗಾರ ಎನ್*.ಬಿ. ಪಾಟೀಲ ಅವರ ವಿವರಣೆ.

‘ಈ ಕೇಂದ್ರದಲ್ಲಿ ಏಕಕಾಲಕ್ಕೆ 25 ಜನ ಶಿಕ್ಷಕರಿಗೆ ತರಬೇತಿ ನೀಡಲು ಸಾಧ್ಯ. ಹೈದರಾಬಾದ್* ಕರ್ನಾಟಕದ ಸರ್ಕಾರಿ ಪ್ರೌಢ ಶಾಲಾ ಇಂಗ್ಲಿಷ್* ಶಿಕ್ಷಕರಿಗೆ ಸರದಿಯಂತೆ ತರಬೇತಿ ನೀಡಲಾಗುವುದು’ ಎಂದು ಅವರು ಹೇಳಿದರು.
ಎರಡನೇ ಕೇಂದ್ರ: ಪಾಟೀಲ
‘ಬೆಂಗಳೂರು ವಿಶ್ವವಿದ್ಯಾಲ*ಯದ ಜ್ಞಾನಭಾರತಿ ಆವರಣದಲ್ಲಿ ದಕ್ಷಿಣ ಭಾರತ ಪ್ರಾದೇಶಿಕ ಇಂಗ್ಲಿಷ್* ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಈ ಕೇಂದ್ರದ ವ್ಯಾಪ್ತಿಯಲ್ಲಿವೆ. ಅದನ್ನು ಹೊರತುಪಡಿಸಿದರೆ ನಮ್ಮ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಎರಡನೇ ಇಂಗ್ಲಿಷ್* ಭಾಷಾ ಪ್ರಯೋಗಾಲಯ ಇದಾಗಲಿದೆ’ ಎನ್ನುತ್ತಾರೆ ಬೆಂಗಳೂರಿನ ದಕ್ಷಿಣ ಭಾರತ ಪ್ರಾದೇಶಿಕ ಇಂಗ್ಲಿಷ್* ಸಂಸ್ಥೆಯ ಹಿಂದಿನ ನಿರ್ದೇಶಕರೂ ಆಗಿರುವ ಎನ್*.ಬಿ. ಪಾಟೀಲ.


http://www.prajavani.net/news/article/2017/02/21/473347.html
 

·
Registered
Joined
·
1,464 Posts
CUK Gulbarga new course

ಇಲ್ಲಿನ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಶೈಕ್ಷಣಿಕ ವರ್ಷದಿಂದ ಹೊಸತಾಗಿ ಬಿಇಡಿ ಹಾಗೂ ಎಂಇಡಿ ಕೋರ್ಸ್*ಗಳನ್ನು ಆರಂಭಿ ಸಲು ಮುಂದಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕೇಂದ್ರೀಯ ವಿವಿಗೆ ಈ ಕೋರ್ಸ್* ಆರಂಭಕ್ಕೆ ಪರವಾನಗಿ ನೀಡಿದೆ. ಇದೇ ಶಿಕ್ಷಣ ವರ್ಷದಿಂದ ಈ ಹೊಸ ಕೋರ್ಸ್*ಗಳು ಕೇಂದ್ರೀಯ ವಿವಿ ಕ್ಯಾಂಪಸ್*ನಲ್ಲಿ ಶುರುವಾಗಲಿವೆ ಎಂದು ಕುಲಪತಿ ಡಾ. ಮಹೇಶ್ವರಯ್ಯ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಶಿಕ್ಷಣ ತರಬೇತಿ ಕೋರ್ಸ್*ಗಳು ಈಗ ತೊಂದರೆಯಲ್ಲಿವೆ, ಈಗ್ಯಾಕೆ ಕೇಂದ್ರೀಯ ವಿವಿ ಈ ಕೋರ್ಸ್* ಆರಂಭಿಸುತ್ತಿದೆಯೋ ಎಂಬುದು ಹಲವರ ಪ್ರಶ್ನೆಯಾಗಬಹುದು. ಆದರೆ ಈ ಕೋರ್ಸ್* ಗುಣಮಟ್ಟದಿಂದ ಕೂಡಿದ ಪಠ್ಯದ ಜೊತೆಗೆ ಆರಂಭಿಸುವ ಚಿಂತನೆ ತಮ್ಮದಾಗಿದೆ. ಹೀಗಾಗಿ ಸಹಜ ವಾಗಿಯೇ ಇಂತಹ ಕೋರ್ಸ್*ಗೆ ಬೇಡಿಕೆ ಹೆಚ್ಚಲಿದೆ ಎಂದರು. ಖಾಲಿ ಹುದ್ದೆ ಭರ್ತಿ: ಕೇಂದ್ರೀಯ ವಿವಿಯಲ್ಲಿ ಮಂಜೂರಾಗಿರುವ ಹುದ್ದೆಗಳಲ್ಲಿ ಕೇವಲ 50 ಮಾತ್ರ ಭರಿಸಲಾಗಿದೆ. ಶೀಘ್ರವೇ ತಾವು ಮೀಸಲಾತಿ ಪ್ರಕಾರ ಇನ್ನುಳಿದ ಬೋಧಕ ಹುದ್ದೆ ತುಂಬಲು ಕ್ರಮ ಜರುಗಿಸುತ್ತಿರುವುದಾಗಿ ಡಾ. ಮಹೇಶ್ವರಯ್ಯ ಹೇಳಿದರು. ಕಲಂ 371 (ಜೆ) ಮೀಸಲಾತಿ ಕೇಂದ್ರೀಯ ವಿವಿ ಬೋಧಕ ಹುದ್ದೆ ಭರ್ತಿಯಲ್ಲಿ ಅನ್ವಯಿಸದು. ಈ ವಿಚಾರದಲ್ಲಿ ತಾವು ಭಾರತ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ, ಸ್ಪಷ್ಟನೆ ಪಡೆದಿದ್ದಾಗಿ ಹೇಳಿದ ಕುಲಪತಿಗಳು ಇತರೆ ಎಲ್ಲ ಮೀಸ ಲಾತಿಯಂತೆ ತಾವು ನೇಮಕಾತಿಗೆ ಮುಂದಾ ಗಿದ್ದಾಗಿ ಹೇಳಿದ್ದಾರೆ. ಆದಾಗ್ಯೂ ಬೋಧಕರ ಕೊರತೆ ನೀಗಿಸಲು ವಿವಿ ಈಗಾಗಲೇ 70ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಹೊಂದಿದೆ. ಇವೆರಲ್ಲರೂ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡುತ್ತಿದ್ದಾರೆಂದರು. ಘಟಿಕೋತ್ಸವಕ್ಕೆ ಪ್ರಧಾನಿಗೆ ಆಹ್ವಾನ: ಕೇಂದ್ರೀಯ ವಿವಿ ಘಟಿಕೋತ್ಸವಕ್ಕೆ ಕಳೆದ ಬಾರಿ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿತ್ತು. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನಿಸುವ ಯತ್ನ ಸಾಗಿದೆ ಎಂದ ಅವರು, ವಿವಿಗಳಿಗೆ ಪ್ರಧಾನಮಂತ್ರಿಗಳ ಕಚೇರಿಯಿಂದ ಪತ್ರ ಬಂದಿತ್ತು. ವಿವಿ ಘಟಿಕೋತ್ಸವ, ಕಟ್ಟಡ ಗಳ ವಿಚಾರವಾಗಿ ಮಾಹಿತಿ ಕೋರಲಾಗಿತ್ತು. ನಾವು ಸಲ್ಲಿಸಿದ್ದೇವೆ. ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಘಟಿಕೋತ್ಸವಕ್ಕೆ ಮೋದಿಯವರು ಬರುವ ಬಗ್ಗೆ ಆರಂಭದಲ್ಲಿ ಒಲವು ವ್ಯಕ್ತವಾಗಿತ್ತು. ಆದರೆ ನಡುವೆ ಚುನಾವಣೆ ಬಂದು ವಿಲಂಬವಾಗಿದೆ ಎಂದರು. ಘಟಿಕೋತ್ಸವ ಡಿಸೆಂಬರ್* ಒಳಗೆ ನಡೆಸಬೇಕಿತ್ತು. ಇದೀಗ ಪ್ರಧಾನಮಂತ್ರಿ ಗಳನ್ನು ಆಹ್ವಾನಿಸುವ ಯತ್ನ ಸಾಗಿದೆ, ಜೊತೆಗೆ ಮಾನವ ಸ್ಪಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್* ಅವರಿಗೂ ಆಹ್ವಾನಿಸುವ ಯತ್ನಗಳು ಸಾಗಿವೆ. ಶೀಘ್ರವೇ ಘಟಿಕೋತ್ಸವ ನಡೆಸುವ ವಿಶ್ವಾಸ ತಮಗಿದೆ ಎಂದು ಡಾ. ಮಹೇಶ್ವರಯ್ಯ ಹೇಳಿದ್ದಾರೆ.
 
101 - 108 of 108 Posts
This is an older thread, you may not receive a response, and could be reviving an old thread. Please consider creating a new thread.
Top