SkyscraperCity banner

121 - 140 of 142 Posts

·
Registered
Joined
·
18 Posts
A high-level review meeting, chaired by Public Works Minister H.C. Mahadevappa, gave its approval to the alignment and road widening of National Highway 150 from Kalaburagi and connecting Andhra Pradesh.


The meeting, attended by the former Union Minister M. Mallikarjun Kharge, also gave its approval to the formation of the outer ring road in Kalaburagi.


The work will be taken up at an estimated Rs. 900 crore which will include the land acquisition and other costs.


The road, which passes through Yadgir, Raichur and Bellary district, will be widened and aligned from the 34th km to the 125.30th km.


Officials of the National Highways Authority of India said that tenders for the

construction of the road from Kalaburagi to Chittapur Cross had already been finalised and work is likely to begin in June. Mr. Kharge said that the road should first be made motorable by filling up all potholes, since the construction of the new road was expected to begin only after the monsoon in October.


Officials said that the filling of pot holes and the maintenance of the road would be taken up immediately before the work begins.


The first 34 km of the highway will be an asphalt road conforming to the national highway standards, the new road, from the 34th km to the 125.30th km, would be a concrete road as per the new standards fixed by the Union government.


http://www.thehindu.com/todays-pape...ng-alignment-gets-approval/article7168687.ece
____________________________________________________________________

Gulbarga-Gooty New National Highway works gets approval... alongwith second layer of Ring Road to Gulbarga city worth Rs 900 crores... Looks like Kharge-Gadkari closeness is yielding results .... Works already started for Humnabad-Bijapur multilane for NH50, and Gulbarga-Solapur also work will start now Gulbarga-Gooty National Highway... :banana: Gulbarga has 4-5 national highways in district ... :cheers:
wow, great news sunil bhai...:cheers:
what is the current status of Kalaburagi-yadgir stretch of NH150....???
 

·
Registered
Joined
·
5,291 Posts
125 ಕಿ.ಮೀ ರಸ್ತೆಗೆ ₹1,024 ಕೋಟಿ ವೆಚ್ಚ

ಕಲಬುರ್ಗಿ: ‘₹ 1,024 ಕೋಟಿ ವೆಚ್ಚದಲ್ಲಿ 125.30 ಕಿ.ಮೀ ಉದ್ದದ ಕಲಬುರ್ಗಿ–ವಾಡಿ ರಾಷ್ಟ್ರೀಯ ಹೆದ್ದಾರಿ (ನಂ. 150) ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ‘ಕಲಬುರ್ಗಿ, ವಾಡಿ, ಸೈದಾಪುರ, ರಾವೂರ, ಯರಗೋಳ ಮತ್ತು ಕಡೆಚೂರ ಮಾರ್ಗವಾಗಿ ಆಂಧ್ರಪ್ರದೇಶ ಗಡಿಭಾಗದವರೆಗೆ ಈ ರಸ್ತೆ ನಿರ್ಮಿಸಲಾಗುತ್ತಿದೆ.


ಈಗಾಗಲೇ ಅನುದಾನ ಮಂಜೂರಾಗಿದ್ದು, ಮೇ 18ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಜೂನ್ ಮೊದಲ ವಾರದಿಂದ ಕಾಮಗಾರಿ ಆರಂಭಿಸಲಾಗುವುದು. ಇದರಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘35 ಕಿ.ಮೀ ಹೊರ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗೆ ₹ 280 ಕೋಟಿ, ಜೇವರ್ಗಿ–ಶಹಾಪುರ ರಾಷ್ಟ್ರೀಯ ಹೆದ್ದಾರಿಯ (13 ಕಿ.ಮೀ) ನವೀಕರಣ ಕಾಮಗಾರಿಗೆ ₹ 5.60 ಕೋಟಿ, ಮಹಾರಾಷ್ಟ್ರ ಗಡಿಯಿಂದ ಹುಮನಾ ಬಾದ್*ವರೆಗೆ 102 ಕಿ.ಮೀ ರಸ್ತೆ ನಿರ್ಮಾಣಕ್ಕೆ ₹ 1,200 ಕೋಟಿ, ಚೌಡಾಪುರ–ಅಫಜಲಪುರ–ಹೊಸೂರು ದ್ವಿಪಥ ರಸ್ತೆ (46 ಕಿ.ಮೀ)ಗೆ ₹ 76 ಕೋಟಿ, ಅಫಜಲಪುರ–ಬಳ್ಳೂರ್ಗಿ–ಧುದನಿಯ 13 ಕಿ.ಮೀ ರಸ್ತೆ ಅಭಿವೃದ್ಧಿಗೆ ₹ 40 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ತಿಳಿಸಿದರು.


‘ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್*ಡಿಸಿಎಲ್*)ದಿಂದ ₹ 1 ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ 120 ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಸೇಡಂ ತಾಲ್ಲೂಕಿನ ಮಳಖೇಡ ಬಳಿಯ ಸೇತುವೆಯೂ ಸೇರಿದೆ. ಅಪೆಂಡಿಕ್ಸ್–ಇ ಅಡಿ ಕಲಬುರ್ಗಿ ಜಿಲ್ಲೆಗೆ ₹146 ಕೋಟಿ ಹಾಗೂ ಯಾದಗಿರಿ ಜಿಲ್ಲೆಗೆ ₹ 81 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.


‘ಬೀದರ್ ಜಿಲ್ಲೆಯ ಕಮಲನಗರದಿಂದ ಹುಮನಾಬಾದ್*ವರೆಗೆ ಹಲಬರ್ಗಾ, ನೌಬಾದ್, ಹಳ್ಳಿಖೇಡ (ಬಿ) ಮಾರ್ಗವಾಗಿ 102 ಕಿ.ಮೀ ರಸ್ತೆ ನವೀಕರಣ ಮಾಡಲಾಗುತ್ತಿದೆ. ರಸ್ತೆಗಳ ಸ್ಥಿತಿಗತಿಗಳನ್ನು ಆನ್*ಲೈನ್*ನಲ್ಲೇ ನೋಡಲು ಅನುಕೂಲವಾಗುವಂತೆ ದೇಶದಲ್ಲೇ ಮೊದಲ ಬಾರಿಗೆ ರಸ್ತೆ ಮಾಹಿತಿ ವ್ಯವಸ್ಥೆ (ಆರ್*ಐಎಸ್) ಜಾರಿಗೆ ತರಲಾಗಿದೆ’ ಎಂದು ವಿವರಿಸಿದರು.


ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸಿದರೂ ಕಾಮಗಾರಿ ಆರಂಭಿಸದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮದ (ಎನ್*ಎಚ್*ಎಐ) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


‘ಕಲಬುರ್ಗಿ–ವಾಡಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಆದಷ್ಟು ಬೇಗನೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಅದೇ ರೀತಿ ದೇವಲಗಾಣಗಾಪುರ–ಅಫಜಲಪುರ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಮಾಹಿತಿ ನೀಡಿದರು.


ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ಬೀದರ್ ಸಂಸದ ಭಗವಂತ ಖೂಬಾ, ಶಾಸಕರಾದ ಪ್ರಿಯಾಂಕ್ ಖರ್ಗೆ, ಅಲ್ಲಮಪ್ರಭು ಪಾಟೀಲ, ಅಮರನಾಥ ಪಾಟೀಲ, ಅಜಯ್*ಸಿಂಗ್, ಬಿ.ಆರ್.ಪಾಟೀಲ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್* ಅಸಗರ್ ಚುಲಬುಲ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಲೋಕೋಪ ಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.


http://www.prajavani.net/article/125-ಕಿಮೀ-ರಸ್ತೆಗೆ-₹1024-ಕೋಟಿ-ವೆಚ್ಚ
 

·
Registered
Joined
·
5,291 Posts
Outer ring road to soon become a reality

The proposed 46-km road to provide connectivity to major State highways


One of the long-pending demands for the construction of an outer ring road, to overcome traffic congestion and avoid the movement of heavy vehicles inside the city, has become a reality now with the Union and State governments joining hands to take up the construction of the 46-km outer ring road.

Linking highways
The proposed road would provide connectivity to all the major State highways connecting different taluks including Jewargi, Aland, Afsalpur, Sedam, Chincholi and Chitapur and also the national highways connecting Telangana, Andhra Pradesh and Maharashtra.


This would enable the trucks transporting goods and cement to other States to directly proceed to their destination without entering the city.


The existing 22.5-km ring road has outlived its utility and has become a part of the city. The proposed outer ring road would provide connectivity to the Kalaburagi-Solapur National Highway, Humnabad-Bijapur National Highway and the new national highway connecting Kalaburagi with Andhra Pradesh passing through Yadgir, Raichur and Ballari. It would also provide connectivity with Waghdhari-Ribbanpalli inter-State highway connecting Maharashtra-Karnataka-Andhra Pradesh.

Feasibility survey
Sources in the National Highway Division told The Hindu here on Wednesday that tenders for engaging a consultant to carryout the feasibility survey and prepare a Detailed Project Report (DPR) has already been floated. As per the present indications, the consultant appointed for the purpose would start the survey work from June this year and complete it by December this year.


As per the present proposals agreed upon by the Union and State governments, 35 km of the proposed outer ring road would be constructed by the funds provided by the Union government by the National Highway Division and the remaining 11 km would be constructed by the Karnataka Road Development Corporation Ltd. on the same national highway standard with four-lane divided carriageway and grade separators.


Land acquisition
As per the preliminary survey conducted by the Kalaburagi Urban Development Authority in 2010, a total of 662.28 acres of land was required to construct the outer ring road and Rs. 135 crore was estimated to be the land acquisition cost. But with the spiralling land cost, the cost of acquisition is likely to be more than double.
The existing 22.5-km ring road has outlived
its utility
Rs. 135 crore is estimated to be the land acquisition cost


http://www.thehindu.com/todays-pape...d-to-soon-become-a-reality/article7178897.ece
 

·
Registered
Joined
·
5,291 Posts
^^Good to hear

That will ensure planned growth
The plan of KUDA(earlier GUDA) is by 2010 first ring road... 2020 second ring road and 2030 thrid ring road! This will help in sustained Circular growth with grid pattern in between...
 

·
Registered
Joined
·
170 Posts
National Highway Authority is agreed to construct outer ring road for Kalaburagi


ಮಾದರಿ ಚತುಷ್ಪಥ ವರ್ತುಲ ರಸ್ತೆ

ಕಲಬುರ್ಗಿ: ನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳ ಸಾರಿಗೆ ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲು ನೂತನ ಬೈಪಾಸ್* ರಸ್ತೆಯೊಂದನ್ನು ನಿರ್ಮಿಸಲು ಕೇಂದ್ರದ ರಾಷ್ಟ್ರೀಯ ಹೆದ್ದಾರಿಗಳ ಇಲಾಖೆ ಒಪ್ಪಿಕೊಂಡಿದೆ.
ಹೆಚ್ಚುತ್ತಿರುವ ವಾಹನಗಳ ದಟ್ಟಣೆ ಗಮನದಲ್ಲಿಟ್ಟುಕೊಂಡು ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರವು 46 ಕಿಲೋಮೀಟರ್* ಉದ್ದದ ಎರಡನೇ ಹೊರ ವರ್ತುಲ ರಸ್ತೆ (ಔಟರ್* ರಿಂಗ್*ರೋಡ್*) ನಿರ್ಮಿಸುವ ಯೋಜನೆಯನ್ನು ಈ ಹಿಂದೆಯೇ ಸಿದ್ಧಪಡಿಸಿತ್ತು.
ರಾಜ್ಯ ಸರ್ಕಾರ ಈ ಯೋಜನೆಯನ್ನು 2010ರಲ್ಲಿ ಅನುಮೋದಿಸಿತ್ತು. ಆ ನಂತರ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯು ಕಲಬುರ್ಗಿ ನಗರಕ್ಕೆ 35 ಕಿಲೋಮೀಟರ್* ಉದ್ದದ ಬೈಪಾಸ್* ರಸ್ತೆ ನಿರ್ಮಿಸಲು ಯೋಜಿಸಿರುವುದರಿಂದ, ಎರಡನೇ ಹೊರವರ್ತುಲ ರಸ್ತೆ ನಿರ್ಮಾಣದ ಕನಸು ಕೂಡಾ ಕೈಗೂಡುತ್ತಿದೆ.
‘ನಗರಾಭಿವೃದ್ಧಿ ಪ್ರಾಧಿಕಾರವು ಯೋಜಿಸಿದ ಹೊಸ ಹೊರವರ್ತುಲ ರಸ್ತೆಯ ರೂಪುರೇಷೆ ಸರಿಯಾಗಿದೆ. ಅದೇ ಮಾರ್ಗದಲ್ಲಿ 35 ಕಿಲೋಮೀಟರ್* ಬೈಪಾಸ್* ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಕೇಂದ್ರದ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್* ಗಡ್ಕರಿ ಒಪ್ಪಿಕೊಂಡಿದ್ದಾರೆ’ ಎಂದು ಕೆಯುಡಿಎ ಅಧ್ಯಕ್ಷ ಅಸಗರ್ ಚುಲಬುಲ್* ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಬೈಪಾಸ್* ರಸ್ತೆಯ ಆರಂಭ ಮತ್ತು ಮುಕ್ತಾಯದ ಮಧ್ಯೆದಲ್ಲಿ ಸಂಪರ್ಕ ಕಲ್ಪಿಸಿದರೆ ಹೊಸ ಹೊರವರ್ತುಲ ರಸ್ತೆ ನಿರ್ಮಾಣ ಯೋಜನೆಯು ಪೂರ್ಣವಾದಂತಾಗುತ್ತದೆ. ಈ ಮೂಲಕ ಕಲಬುರ್ಗಿ ನಗರವು ಚತುಷ್ಪಥ ಹೊರ ವರ್ತುಲ ರಸ್ತೆ ಹೊಂದಿದ ರಾಜ್ಯದ ಮೊದಲ ನಗರ ಎನ್ನುವಹೆಗ್ಗಳಿಕೆಗೆ ಪಾತ್ರವಾಗಲಿದೆ.
ಬೈಪಾಸ್* ರಸ್ತೆ ಮಾರ್ಗ: ಕಲಬುರ್ಗಿ–ಸೊಲ್ಲಾಪುರ ಮಾರ್ಗವಾಗಿ ಅಕ್ಕಲಕೋಟ, ಅಫಜಲಪುರ ನೂತನ ರಾಷ್ಟ್ರೀಯ ಹೆದ್ದಾರಿ (ಎನ್*ಎಚ್* 150–ಇ)ಯಿಂದ ಆಳಂದ ಮಾರ್ಗದ ವಾಘದರಿ–ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ (ಎಸ್*ಎಚ್* 10), ಅಲ್ಲಿಂದ ಹುಮನಾಬಾದ್* ಮಾರ್ಗ ರಾಷ್ಟ್ರೀಯ ಹೆದ್ದಾರಿ (ಎನ್*ಎಚ್* 50)– ಸೇಡಂ ಮಾರ್ಗದ ರಾಜ್ಯ ಹೆದ್ದಾರಿ, ಶಹಾಬಾದ್* ಮಾರ್ಗದ ನೂತನ ರಾಷ್ಟ್ರೀಯ ಹೆದ್ದಾರಿ (ಎನ್*ಎಚ್*–150)ಯಿಂದ ಜೇವರ್ಗಿ ಮಾರ್ಗದವರೆಗೂ ವಿವಿಧ ರಸ್ತೆಗಳ ಮಧ್ಯೆ ಸಂಪರ್ಕ ಕಲ್ಪಿಸಲು ಒಟ್ಟು 35 ಕಿಲೋ ಮೀಟರ್* ಉದ್ದದ ಚತುಷ್ಪಥ ಬೈಪಾಸ್* ರಸ್ತೆಯನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತದೆ. ಈ ಬೈಪಾಸ್* ರಸ್ತೆಯನ್ನು ಹೊರವರ್ತುಲ ರಸ್ತೆಯಾಗಿ ಮಾರ್ಪಡಿಸಲು ಅಫಜಲಪುರ ಮಾರ್ಗದಿಂದ ಜೇವರ್ಗಿ ಮಾರ್ಗ ವಯಾ ಉದನೂರು ಮಧ್ಯೆ 11 ಕಿಲೋ ದೂರದ ರಸ್ತೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವು (ಕೆಆರ್*ಡಿಸಿಎಲ್*) ನಿರ್ಮಿಸಲಿದೆ.
ಈ ಮೂಲಕ ಒಟ್ಟು 46 ಕಿಲೋ ಮೀಟರ್* ಉದ್ದದ ಹೊಸ ಹೊರವರ್ತುಲ ರಸ್ತೆಯ ಯೋಜನೆಯು ಪೂರ್ಣಗೊಳ್ಳಲಿದೆ.
2016 ರಿಂದ ಕಾಮಗಾರಿ: ಬೈಪಾಸ್* ರಸ್ತೆ ನಿರ್ಮಾಣಕ್ಕೆ ಸಮಗ್ರ ಯೋಜನೆ (ಡಿಪಿಆರ್*) ಸಿದ್ಧಪಡಿಸುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯು ಈಗಾಗಲೇ ಗುತ್ತಿಗೆ ವಹಿಸಿದೆ. ವರ್ಷಾಂತ್ಯಕ್ಕೆ ಸಮಗ್ರ ಯೋಜನೆಯು ಸಿದ್ಧವಾಗಲಿದೆ.
ಒಟ್ಟು 60 ಮೀಟರ್* ಅಗಲದ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ಕಲಬುರ್ಗಿ ಸುತ್ತಮುತ್ತಲಿನ 19 ಗ್ರಾಮಗಳ ಜಮೀನು ಈ ರಸ್ತೆ ನಿರ್ಮಾಣದಲ್ಲಿ ಬರಲಿದೆ. ಸಮಗ್ರ ಯೋಜನೆಯು ವರ್ಷಾಂತ್ಯಕ್ಕೆ ಸಲ್ಲಿಕೆಯಾಗಲಿದ್ದು, 2016ರಿಂದ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದು ಕೆಯುಡಿಎ ಅಧಿಕಾರಿಗಳು ತಿಳಿಸಿದರು.
 

·
Registered
Joined
·
1,464 Posts
25 ಕಿಮೀ ಚತುಷ್ಪಥ ವರ್ತುಲ ರಸ್ತೆ ನಿರ್ಮಾಣ ಶೀಘ್ರ

ಕಲಬುರಗಿ: ಕಲಬುರಗಿ ಮಹಾನಗರದ ಹಾಲಿ ವರ್ತುಲ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೂಪಿಸಲಾಗಿದ್ದು, ಸದರಿ ಯೋಜನೆಯನ್ನು ನಗರ ಸೌಂದರ್ಯೀಕರಣ ಸಮಿತಿಯ ಅನುಮೋದನೆ ಪಡೆದು ಅನುಷ್ಠಾನಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಖಮರುಲ್ ಇಸ್ಲಾಂ ಅವರು ಸೂಚಿಸಿದರು.

ಅವರು ಸೋಮವಾರ ಕಲಬುರಗಿಯಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಆಯೋಜಿಸಿದ ನಗರ ಸೌಂದರ್ಯೀಕರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜಯಪುರ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 (ಹಳೆಯ ಸಂಖ್ಯೆ 210)ರ ಒಟ್ಟು 220 ಕಿ.ಮೀ. ಉದ್ದವಿದ್ದು, ಈ ಪೈಕಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 25 ಕಿ.ಮೀ. ವ್ಯಾಪ್ತಿಯ ವರ್ತುಲ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಚತುಷ್ಪಥ ನಿರ್ಮಿಸಲಾಗುವುದು. ಸದರಿ ರಸ್ತೆ ಕಾಮಗಾರಿಯನ್ನು ಖಾಸಗಿ ನಿರ್ಮಾಣ ಸಂಸ್ಥೆಯಾದ ಎಲ್ ಅಂಡ್ ಟಿ ಕನ್*ಸ್ಟ್ರಕ್ಷನ್ ಕಂಪನಿಗೆ ವಹಿಸಲಾಗಿದೆ. ಇದನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಕಲಬುರಗಿ ಮಹಾನಗರ ಪಾಲಿಕೆಯ ಕಾರ್ಯ ಯೋಜನೆ ಮತ್ತು ಸಮನ್ವಯತೆಯಿಂದ ಸದರಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದರು.

ಈ ವರ್ತುಲ ರಸ್ತೆಯು ಕಲಬುರಗಿ ನಗರದ ಜೇಲ್ ಹತ್ತಿರದಿಂದ ರಾಮಮಂದಿರ-ಸೇಡಂ ವರ್ತುಲ ರಸ್ತೆ ಮಾರ್ಗವಾಗಿ ಉಪಳಾಂವ ಗ್ರಾಮದ ಹದ್ದಿನವರೆಗೆ ಕಲಬುರಗಿ ಪ್ರಾಧಿಕಾರದ ವ್ಯಾಪ್ತಿಯೊಳಗೆ ಬರುತ್ತಿದ್ದು, ಸದರಿ ರಸ್ತೆಯಲ್ಲಿ ವರ್ತುಲಗಳು, ಡಿವೈಡರ್, ಸರ್ವಿಸ್ ಡಕ್ಟ್ ರೋಡ್, ಪಾದಚಾರಿ ಮಾರ್ಗಗಳು, ಸರ್ವಿಸ್ ರಸ್ತೆ ಇತರ ಸೌಲಭ್ಯಗಳನ್ನು ಅಳವಡಿಸುವುದು ಅತೀ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ರಸ್ತೆಯ ನಿರ್ಮಾಣ ಹಂತದ ಯೋಜನೆಯಲ್ಲಿ ಅಳವಡಿಸಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ನಿರ್ಮಾಣ ಸಂಸ್ಥೆಯಾದ ಎಲ್ ಅಂಡ್ ಟಿ ಕನಸ್ಟ್ರಕ್ಷನ್ ಕಂಪನಿಯ ಮುಖ್ಯ ಯೋಜನಾ ವ್ಯವಸ್ಥಾಪಕರಿಗೆ ಹಾಗೂ ಯೋಜನಾ ವ್ಯವಸ್ಥಾಪಕರಿಗೆ ಮತ್ತಿತರ ಅಧಿಕಾರಿಗಳಿಗೆ ಸಚಿವರು ಸೂಕ್ತ ನಿರ್ದೇಶನ ನೀಡಿದರು.

ಕಲಬುರಗಿ ನಗರದ ಹಾಲಿ ವರ್ತುಲ ರಸ್ತೆ ರಾಮಮಂದಿರ ವೃತ್ತದಿಂದ ಹುಮನಾಬಾದ ರಸ್ತೆಯವರೆಗೆ 11 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣದ ವಿನ್ಯಾಸವನ್ನು ತಯಾರಿಸುವ ಹಂತದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಕಲಬುರಗಿ ಮಹಾನಗರ ಪಾಲಿಕೆಯ ಸಲಹೆ ಸೂಚನೆ ಪಡೆಯುವಂತೆ ಸೂಚಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಕಲಬುರಗಿ ಮಹಾನಗರ ಪಾಲಿಕೆಯ ಮಹಾ ಪೌರ ಭೀಮರೆಡ್ಡಿ ಪಾಟೀಲ ಕುರಕುಂದಾ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮೀತಸಿಂಗ್,್ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಂಟಿ, ನಗರ ಯೋಜನಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನಗರ ಸೌಂದರ್ಯಿಕರಣ ಸಮಿತಿಯ ಸದಸ್ಯರು ಸಭೆಯ ಚರ್ಚೆಯಲ್ಲಿ ಹಾಜರಿದ್ದರು. ಇದಕ್ಕೂ ಮುನ್ನ ಕಲಬುರಗಿ ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ಜರುಗಿತು.

http://vijaykarnataka.indiatimes.com/district/kalaburagi/25-/articleshow/47600484.cms
 

·
Registered
Joined
·
1,464 Posts
ಸೇಡಂ ರಸ್ತೆ ವಿಸ್ತರಣೆ ಸನ್ನಿಹಿತ

ಕಲಬುರ್ಗಿ: ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಕ್ರಮಕಲಬುರ್ಗಿ: ಹೆಚ್ಚುತ್ತಿರುವ ವಾಹನಗಳ ದಟ್ಟಣೆಯಿಂದಾಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಅನ್ನಪೂರ್ಣ ವೃತ್ತ– ಖರ್ಗೆ ಪೆಟ್ರೊಲ್* ಬಂಕ್*ವರೆಗಿನ ಸೇಡಂ ಮಾರ್ಗದ ರಸ್ತೆ ವಿಸ್ತರಣೆಗೆ ಇದೀಗ ಟೆಂಡರ್* ಕರೆಯಲಾಗಿದ್ದು, ಕೊನೆಗೂ ರಸ್ತೆ ವಿಸ್ತರಣೆಯಾಗುವ ಕಾಲ ಸನ್ನಿಹಿತವಾಗಿದೆ.


ಹೈದರಾಬಾದ್* ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಎಚ್*ಕೆಆರ್*ಡಿಬಿ) ಅನುದಾನದ ನೆರವಿನಲ್ಲಿ ಮಹಾನಗರ ಪಾಲಿಕೆಯು ಈ ಕಾಮಗಾರಿ ಅನುಷ್ಠಾನಗೊಳಿಸುತ್ತಿದೆ. 2.4 ಕಿಲೋ ಮೀಟರ್* ಉದ್ದವಿರುವ ಈ ರಸ್ತೆಯ ವಿಸ್ತರಣೆಗಾಗಿ ಒಟ್ಟು ₹9.62 ಕೋಟಿ ಅನುದಾನ ಮೀಸಲಿಡಲಾಗಿದೆ. ರಸ್ತೆಯುದ್ದಕ್ಕೂ ತೆರವುಗೊಳಿಸುವ ಕಟ್ಟಡಗಳಿಗೆ ಪರಿಹಾರ ಹಂಚುವ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆ.


ಟೆಂಡರ್ ಪ್ರಕ್ರಿಯೆ ಮುಗಿದ ನಂತರ, ಶೀಘ್ರದಲ್ಲೆ ಕಾಮಗಾರಿ ಆರಂಭಿಸುವ ಇಂಗಿತ ಹೊಂದಿರುವುದಾಗಿ ಮಹಾನಗರ ಪಾಲಿಕೆಯ ಎಂಜಿನಿಯರಿಂಗ್* ವಿಭಾಗದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.


ಶ್ರೀನಿವಾಸ ಸರಡಗಿ ಬಳಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಗರದ ರಸ್ತೆಗಳನ್ನು ವಿಸ್ತರಿಸುವುದಕ್ಕೆ ₹34 ಕೋಟಿ ಅನುದಾನವನ್ನು ಎಚ್*ಕೆಆರ್*ಡಿಬಿ ಮೀಸಲಿಟ್ಟಿದೆ. ಈ ಮೀಸಲು ಅನುದಾನದಲ್ಲಿ ಸೇಡಂ ಮಾರ್ಗದ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.


ಸದ್ಯದ ರಸ್ತೆಯು 7 ಮೀಟರ್* ಅಗಲವಿದೆ. ಹಾಲಿ ರಸ್ತೆಯ ಎಡಬಲಕ್ಕೆ 5.5 ಮೀಟರ್* ಅಗಲದ ನೂತನ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಇದರಿಂದ ಒಟ್ಟು 18 ಮೀಟರ್* ಅಗಲದ ದ್ವಿಪಥ ರಸ್ತೆಯು ಸುಗಮ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿದೆ.

ಕಿರಿದಾದ ರಸ್ತೆ: ಸೇಡಂ ಮಾರ್ಗವಾಗಿ ತೆಲಂಗಾಣದ ರಿಬ್ಬನಪಲ್ಲಿಯಿಂದ ಆಳಂದ ಮಾರ್ಗವಾಗಿ ಮಹಾರಾಷ್ಟ್ರದ ವಾಗ್ದರಿವರೆಗೆ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು (ಸಂಖ್ಯೆ 50) ಕಲಬುರ್ಗಿ ನಗರ ಮಧ್ಯೆ ಹಾಯ್ದು ಹೋಗಿದೆ. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿದ ಈ ನೂತನ ರಸ್ತೆಯಲ್ಲಿ ಸಂಚರಿಸುವ ವಾಹನಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.


ಈ ಹೆದ್ದಾರಿ ಮೂಲಕ ಕಲಬುರ್ಗಿಗೆ ಬರುವ ಲಾರಿ ಹಾಗೂ ಇನ್ನಿತರೆ ಭಾರದ ವಾಹನಗಳ ಸಂಚಾರಕ್ಕಾಗಿ ವರ್ತುಲ ರಸ್ತೆ ಬಳಕೆಯಾಗುತ್ತಿದೆ. ಆದರೆ, ಪ್ರಯಾಣಿಕ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಹಗಲಿರುಳು ನಗರದೊಳಗಿನಿಂದಲೇ ಸಂಚರಿಸುತ್ತಿವೆ. ವಾಹನ ದಟ್ಟಣೆ ಹೆಚ್ಚಳಕ್ಕೆ ಇದು ಒಂದು ಕಾರಣವಾಗಿದೆ.


ಸೇಡಂ ರಸ್ತೆ ಮಾರ್ಗದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ, ಇಎಸ್*ಐಸಿ, ಬಸವೇಶ್ವರ ಆಸ್ಪತ್ರೆ, ಆರ್*ಟಿಒ ಕಚೇರಿಗಳು ಹಾಗೂ ವಿವಿಧ ಶಾಲಾ–ಕಾಲೇಜುಗಳಿವೆ. ಪ್ರಮುಖ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಇರುವ ಕಾರಣದಿಂದ ಈ ರಸ್ತೆಯ ಬಳಸುವ ನೌಕರರು ಹಾಗೂ ವಿದ್ಯಾರ್ಥಿಗಳು ಅನೇಕ ವರ್ಷಗಳಿಂದ ಕಿರಿದಾದ ರಸ್ತೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

http://www.prajavani.net/article/ಸೇಡಂ-ರಸ್ತೆ-ವಿಸ್ತರಣೆ-ಸನ್ನಿಹಿತ
 

·
Registered
Joined
·
1,464 Posts
ಅಡ್ಡ ರಸ್ತೆಗಳಲ್ಲಿ ‘ಕಾನ್ವೆಕ್ಸ್* ಮಿರರ್*’

ಕಲಬುರ್ಗಿ ನಗರದಲ್ಲಿ ಅಳವಡಿಸಿರುವ ‘ಕಾನ್ವೆಕ್ಸ್* ಮಿರರ್*’ನಲ್ಲಿ ಕಾಣುತ್ತಿರುವ ವಾಹನ ಸವಾರರ ಪ್ರತಿಬಿಂಬ
ಕಲಬುರ್ಗಿ: ನಗರದ ಪ್ರಮುಖ ರಸ್ತೆಗಳನ್ನು ಕೂಡುವ ಅಡ್ಡ ರಸ್ತೆಗಳಿಗೆ ಬಿಂಬ ಪ್ರತಿಫಲನ ನಿಲುವು ಕನ್ನಡಿಗಳನ್ನು (ಕಾನ್ವೆಕ್ಸ್* ಮಿರರ್*) ಅಳವಡಿಸಲಾಗಿದೆ. ಇದನ್ನು ವಾಹನ ಚಾಲಕರು ಗಂಭೀರವಾಗಿ ಗಮನಿಸಿದರೆ ಅಪಘಾತಗಳನ್ನು ತಡೆಯಲು ಅನುಕೂಲವಾಗಲಿದೆ.


ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅಡ್ಡ ರಸ್ತೆಗಳಿಂದ ಮುಖ್ಯ ರಸ್ತೆಗೆ ಬರುವ ವಾಹನಗಳನ್ನು ಗಮನಿಸುವುದಿಲ್ಲ. ಈ ಸಂದರ್ಭ ಅಪಘಾತಗಳು ಸಂಭವಿಸಿ ಪ್ರಾಣಾಪಾಯ ಆಗುವ ಸಾಧ್ಯತೆಗಳಿವೆ. ಈ ಬಿಂಬ ಪ್ರತಿಫಲನ ನಿಲುವು ಕನ್ನಡಿಗಳನ್ನು ಬಳಕೆ ಮಾಡುವುದರಿಂದ ಎಡ ಮತ್ತು ಬಲದಿಂದ ಬರುತ್ತಿರುವ ವಾಹನಗಳನ್ನು ಗುರುತಿಸಲು ಸಹಾಯವಾಗುತ್ತದೆ ಎನ್ನುತ್ತಾರೆ ಪೊಲೀಸರು.


ಹೈದರಾಬಾದ್* ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್*ಕೆಆರ್*ಡಿಬಿ)ಯ ಅನುದಾನದಲ್ಲಿ ಈ ನಿಲುವು ಕನ್ನಡಿಗಳನ್ನು ಖರೀದಿಸಲಾಗಿದೆ. ನಗರದ ಸ್ಟೇಷನ್* ಬಜಾರ್* ರಸ್ತೆ ಸೇರಿದಂತೆ ಪ್ರಮುಖ 24 ಸ್ಥಳಗಳಲ್ಲಿ ಇವುಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಕಾನ್ವೆಕ್ಸ್* ಮಿರರ್*ಗೆ ₨6 ಸಾವಿರ ವೆಚ್ಚವಾಗಿದೆ. ಕಳೆದ 2 ತಿಂಗಳಿಂದ ಇವುಗಳನ್ನು ಅಳವಡಿಸಲಾಗುತ್ತಿದೆ. 2ನೇ ಹಂತದಲ್ಲಿ ಮತ್ತಷ್ಟು ಸ್ಥಳಗಳಲ್ಲಿ ಬಿಂಬ ಪ್ರತಿಫಲನ ಕನ್ನಡಿ ಅಳವಡಿಸಲು ಪೊಲೀಸ್* ಇಲಾಖೆ ಸಿದ್ಧತೆ ನಡೆಸಿದೆ.


‘ನಗರದ ಪ್ರಮುಖ ಎಲ್ಲ ಸ್ಥಳಗಳಲ್ಲಿ ಕಾನ್*ಸ್ಟೆಬಲ್*ಗಳನ್ನು ನಿಯೋಜಿಸಲು ಸಾಧ್ಯವಿಲ್ಲ. ಚಾಲಕರು ಜಾಗ್ರತೆಯಿಂದ ವಾಹನ ಚಲಾಯಿಸಿದರೆ ಅಪಘಾತಗಳನ್ನು ತಡೆಯಬಹುದು. ಈಗ ಅಳವಡಿಸಿರುವ ಕನ್ನಡಿಗಳನ್ನು ಗಮನಿಸಿದರೆ, ಸವಾರರು ತಮ್ಮ ಮೂರೂ ಬದಿಯಿಂದ ಬರುತ್ತಿರುವ ವಾಹನಗಳನ್ನು ಗುರುತಿಸಬಹುದು. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ’ ಎಂದು ನಗರ ಸಂಚಾರ ವಿಭಾಗದ ಇನ್*ಸ್ಪೆಕ್ಟರ್* ಡಿ.ಟಿ.ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದ ಮೂರು ರಸ್ತೆಗಳು ಕೂಡುವ ಪ್ರಮುಖ ಸ್ಥಳಗಳಲ್ಲಿ ಬಿಂಬ ಪ್ರತಿಫಲನ ಕನ್ನಡಿಗಳನ್ನು ಅಳವಡಿಸಲಾಗಿದೆ. ಇನ್ನೂ ಹಲವೆಡೆ ಅಳವಡಿಸಬೇಕಾದ ಅಗತ್ಯವಿದೆ. ಈ ಬಗ್ಗೆ ಎಚ್*ಕೆಆರ್*ಡಿಬಿಯಿಂದ ಅನುದಾನ ಕೋರಲಾಗಿದೆ. ಎಲ್ಲ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸಾಧ್ಯವಿಲ್ಲ. ಇದನ್ನು ವಾಹನ ಸವಾರರು ಗಮನಿಸಿದರೆ ಅದರ ಪ್ರಾಮುಖ್ಯತೆಯ ಅರಿವಾಗುತ್ತದೆ ಎಂದು ಹೇಳಿದರು.


ನಗರದ ಪ್ರಮುಖ ಸ್ಥಳಗಳಲ್ಲಿ ನಗರೋತ್ಥಾನ ಯೋಜನೆಯಡಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅಲ್ಲದೆ ನಗರ ಪಾಲಿಕೆ ಮುಂಭಾಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಸ್ತೆಯ ಮಾರ್ಗಗಳ ಬಗ್ಗೆ ಮಾಹಿತಿ ಇರುವ ಎಲೆಕ್ಟ್ರಾನಿಕ್* ಡಿಸ್*ಪ್ಲೇ ಫಲಕ ಅಳವಡಿಸಲು ಎಚ್*ಕೆಆರ್*ಡಿಬಿಯಿಂದ ಅನುದಾನ ಕೋರಲಾಗಿದೆ ಎಂದು ಅವರು ತಿಳಿಸಿದರು.


‘ನಗರದ ವಾಹನ ಸವಾರರಲ್ಲಿ ಸಂಚಾರ ನಿಯಮಗಳ ಅರಿವಿನ ಕೊರತೆ ಇದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸ್* ಇಲಾಖೆ ಒಂದರಿಂದಲೇ ಜನರಿಗೆ ಅರಿವು ಮೂಡಿಸುವುದು ಕಷ್ಟಸಾಧ್ಯ. ಇದಕ್ಕೆ ಶಾಲೆ, ಕಾಲೇಜು, ಸಂಘ ಸಂಸ್ಥೆಗಳ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ. ವಾಹನಗಳನ್ನು ಪರಿಶೀಲಿಸಿ ದಂಡ ವಿಧಿಸುವುದರಿಂದಲೇ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.


http://www.prajavani.net/article/ಅಡ್ಡ-ರಸ್ತೆಗಳಲ್ಲಿ-‘ಕಾನ್ವೆಕ್ಸ್‌-ಮಿರರ್‌’
 

·
Registered
Joined
·
1,464 Posts
Gulbarga second Ring Road

CABINET CLEARS 23 KM BIDAR OUTER RING ROAD

State Cabinet in a meeting chaired by CM Siddaramaiah has cleared a 23-km ring road at a cost of 47 crore in Bidar city.

The ORR stretch would be built between Dev Dev Vana on Bidar-Hyderabad road to Naubad industrial area on Bidar-Srirangapattana highway...

Funds for the ring road will come from Hyderabad Karnataka Regional Development Board and CM's Nagarothana scheme of the Urban Development Department.

Recently, 46-km long second ring road for Kalaburagi was also approved. Together with the national highway division, the state government will build this important road in Kalaburagi city.

Tenders for Detailed Project Report (DPR) has already been floated and survey would complete by December this year after which construction tender would be called.

The Kalaburagi ORR would provide connectivity to all the major State Highways connecting different taluks including Jewargi, Aland, Afsalpur, Sedam, Chincholi and Chitapur and also the national highways connecting Telangana, Andhra Pradesh and Maharashtra.

Trucks would then not enter the city, making city traffic much better and safer.

Source: GOK/FB
 

·
Registered
Joined
·
1,464 Posts
7 more New National Highways Sanctioned for Bidar Gulbarga Districts

The Union government has approved the upgrading of State highways as national highways, the MP said.

1) Telangana border-Sangam – Bhalki- Muchalamb-Basava Kalyan to Sastapur at Rs. 105 crore,
2) Bidar–Mannaekhalli – Chincholi-Mariya-Tandur-Mehboob Nagar at Rs. 124 crore;
3) Bidar –Ambesangvi–Kamal Nagar at the cost of Rs. 52 crore;
4) Bidar–Humnabad at Rs. 52 crore, Mudbi-Harkud-VK Salgar-Mahagaon-Kodli-Madbool-Tengli cross-Dandoti— Chittapur-Bhimanahalli-Handarki cross-Gurmitkal-Putpak at Rs. 7 crore,
5) Narayankhed-Nizampet Road at Rs. 1.37 crore;
6) Zaheerabad-Bidar-Deglur at Rs. 2 crore;
7) Halbarga-Bhalki-Neelanga-Latur at Rs. 1.68 crore.


http://www.thehindu.com/news/nation...line-project-to-be-revived/article9287268.ece
 

·
Registered
Joined
·
170 Posts
ಸಿಸಿ ರಸ್ತೆ ಕಾಮಗಾರಿಗೆ ಹೊಸ ಯಂತ್ರಸದ್ಯ ಲಾಲ್*ಗೇರಿ ಕ್ರಾಸ್*ನಿಂದ ಸೂಪರ್*ಮಾರ್ಕೆಟ್*ವರೆಗಿನ 2.5 ಕಿ.ಮೀ. ಉದ್ದದ ಸಿಸಿ ರಸ್ತೆ ನಿರ್ಮಾಣದಲ್ಲಿ ಈ ಯಂತ್ರ ಬಳಸಲಾಗಿದೆ

ಕಲಬುರ್ಗಿ: ಸಿಮೆಂಟ್* ಕಾಂಕ್ರೀಟ್* (ಸಿಸಿ) ರಸ್ತೆ ನಿರ್ಮಾಣದಲ್ಲಿ ವೇಗ ಮತ್ತು ಗುಣಮಟ್ಟ ಹೆಚ್ಚಿಸುವ ಹೊಸ ಯಂತ್ರವೊಂದು ಕಲಬುರ್ಗಿ ನಗರಕ್ಕೆ ಬಂದಿದೆ.
ಮುಂಬೈ ಮಹಾನಗರದಲ್ಲಿ ಸಿಸಿ ರಸ್ತೆ ನಿರ್ಮಿಸಲು ಬಳಕೆಯಲ್ಲಿರುವ ‘ಸ್ಲೀಪ್* ಕಾಂಕ್ರೀಟ್* ಪೇವರ್* ಮಷಿನ್*’ನನ್ನು ಪ್ರಭುದೇವ ಕನ್*ಸ್ಟ್ರಕ್ಷನ್* ಕಂಪೆನಿಯು ಬಾಡಿಗೆ ಆಧಾರದಲ್ಲಿ ಕಲಬುರ್ಗಿಗೆ ತಂದಿದೆ.

ಸದ್ಯ ಲಾಲ್*ಗೇರಿ ಕ್ರಾಸ್*ನಿಂದ ಸೂಪರ್*ಮಾರ್ಕೆಟ್*ವರೆಗಿನ 2.5 ಕಿ.ಮೀ. ಉದ್ದದ ಸಿಸಿ ರಸ್ತೆ ನಿರ್ಮಾಣದಲ್ಲಿ ಈ ಯಂತ್ರ ಬಳಸಲಾಗಿದೆ. ₹4 ಕೋಟಿ ವೆಚ್ಚದಲ್ಲಿ ಈ ರಸ್ತೆ ಕಾಮಗಾರಿ ನಡೆಯುತ್ತಿದೆ. ನಗರದಲ್ಲಿ ಮೊದಲ ಬಾರಿ ಈ ಹೊಸ ಯಂತ್ರದಿಂದ 15 ಮೀಟರ್* ಅಗಲದ ಸಿಸಿ ರಸ್ತೆ ನಿರ್ಮಿಸಲಾಗುತ್ತಿದ್ದು , ಲಾಲ್*ಗೇರಿ ಕ್ರಾಸ್*ನಿಂದ ಸೂಪರ್*ಮಾರ್ಕೆಟ್*ವರೆಗೆ 7.5 ಮೀಟರ್* ಸಿಸಿ ರಸ್ತೆ ಒಂದು ಭಾಗದಲ್ಲಿ ಪೂರ್ಣಗೊಂಡಿದೆ. ಇನ್ನೊಂದು ಭಾಗದ 7.5 ಮೀಟರ್ ಅಗಲದ ರಸ್ತೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದು ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್* ಆರ್*.ಪಿ. ಜಾಧವ ‘ಪ್ರಜಾವಾಣಿ’ಗೆ ವಿವರಿಸಿದರು.

ನಿಖರ ಸಮತಟ್ಟು ಮತ್ತು ತುಂಬಾ ಅಚ್ಚುಕಟ್ಟಾದ ಸಿಸಿ ರಸ್ತೆ ಆಗುತ್ತಿದೆ. ಈ ಮೊದಲು ಕಾಂಕ್ರೀಟ್* ಸೆಂಟರ್*ನಲ್ಲಿ ವೈಬ್ರೆಟರ್* ಇಟ್ಟು ನೀರು, ಸಿಮೆಂಟ್* ಮಿಶ್ರಣ ಮಾಡಲಾಗುತ್ತಿತ್ತು. ಆದರೆ ಈ ಯಂತ್ರವು ಎಲ್ಲ ಕಡೆಯಲ್ಲೂ ವೈಬ್ರೆಟ್ ಮಾಡುವುದರಿಂದ ಮಿಶ್ರಣ ಪಕ್ಕಾ ಆಗುತ್ತದೆ. ಗಾಳಿಕಿಂಡಿಗಳು ಉಳಿಯುವುದಿಲ್ಲ. ರಸ್ತೆ ದೀರ್ಘಾವಧಿವರೆಗೆ ಬಾಳಿಕೆ ಬರುವ ನಿರೀಕ್ಷೆ ಇದೆ ಎಂದರು. ಇದೇ ಯಂತ್ರದಿಂದ ಎಸ್*.ಬಿ.ಪೆಟ್ರೋಲ್* ಬಂಕ್*ನಿಂದ ಎಂ.ಎಸ್*.ಕೆ.ಮಿಲ್* ವಯಾ ಜಿಲ್ಲಾ ಕೋರ್ಟ್* ಮಾರ್ಗದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಸಂತ್ರಸವಾಡಿಯಿಂದ ರಿಂಗ್*ರಸ್ತೆ ಸಂಪರ್ಕಿಸುವ ಎಂ.ಜಿ.ರಸ್ತೆ , ಇಲ್ಲಿನ ದುರ್ಗಾದೇವಿ ಗುಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಪಾಲಿಕೆ ಅಧಿಕಾರಿಗಳು ಯೋಜಿಸಿದ್ದಾರೆ.
ಯಂತ್ರದ ಚಾಲಕನಿದ್ದರೆ ಸಾಕು
ಈ ಯಂತ್ರಬಳಸಿದರೆ ಬೆರಳೆಣಿಕೆ ಕಾರ್ಮಿಕರು ಸಾಕಾಗುತ್ತದೆ. ಚಾಲಕನೇ ನಿರ್ವಹಿಸುತ್ತಾನೆ. ಗರಿಷ್ಠ 7.5 ಮೀಟರ್* ಅಗಲ , ಕನಿಷ್ಠ 8 ಅಂಗುಲ ಎತ್ತರದ ರಸ್ತೆ ನಿರ್ಮಾಣಕ್ಕೆ ಯಂತ್ರವನ್ನು ಹೊಂದಿಸಬಹುದು. ಒಂದು ಗಂಟೆಗೆ ಅರ್ಧ ಕಿಲೋ ಮೀಟರ್ ರಸ್ತೆಯನ್ನು ಸಿದ್ಧಪಡಿಸುತ್ತದೆ. ಸಿಮೆಂಟ್* ಕ್ಯುರಿಂಗ್* ಕೆಲಸಕ್ಕೆ ಮಾತ್ರ ಕಾರ್ಮಿಕರನ್ನು ನಿಯೋಜಿಸಬೇಕಾಗುತ್ತದೆ.
ಸೆನ್ಸಾರ್* ಸಮಾಂತರ
ಕಾಂಕ್ರೀಟ್*ನ್ನು ಯಂತ್ರದ ಎದುರು ರಾಶಿ ಹಾಕಲಾಗುತ್ತದೆ. ಯಂತ್ರವು ಎತ್ತರ ಹಾಗೂ ಅಗಲ ಹೊಂದಿಸಿದ ಪ್ರಮಾಣದಲ್ಲಿ ಕಾಂಕ್ರೀಟ್*ನ್ನು ಜೋಡಿಸುತ್ತಾ ಸಾಗುತ್ತದೆ. ವ್ಯತ್ಯಾಸ ಆಗದಂತೆ ಯಂತ್ರದಲ್ಲಿ ಸೆನ್ಸಾರ್*ಗಳವೆ. ಪರಿಣಾಮಕಾರಿ ವೈಬ್ರೆಟರ್* ಇದೆ. ಮಧ್ಯೆ್ಲಿ ಖಾಲಿ ಜಾಗ ಉಳಿಯುವುದಿಲ್ಲ.
ಮುಂಬೈನಿಂದ ಮೊದಲ ಬಾರಿಗೆ ಪ್ರಭುದೇವ ಕನ್*ಸ್ಟ್ರಕ್ಷನ್* ಕಂಪೆನಿಯವರು ಕಲಬುರ್ಗಿಗೆ ಈ ಯಂತ್ರ ತಂದಿದ್ದಾರೆ. ವೇಗ, ಗುಣಮಟ್ಟದ ಕೆಲಸಗಳಾಗುತ್ತಿರುವುದು ಕಂಡು ಬಂದಿದೆ. ಬೆಂಗಳೂರಿನಲ್ಲೂ ಇಂತಹ ಯಂತ್ರವಿಲ್ಲ.
- ಆರ್*.ಪಿ.ಜಾಧವ, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್*
 

·
Registered
Joined
·
1,464 Posts
Gulbarga/Kalaburagi's "Second" ring road total lenght 55Kms got approval from Center and state Govts.

Below are details:
Total Length of Gulbarga's second ring road is about 55Kms, of which NHAI will develop arround 40Kms at estimated cost of 1100 crores.
Remaining 15Kms will be done by Gulbarga/Kalaburagi Urban Development Authority for which there is no estimate as of now.

Six Sections of New(Second) Outer Ring ROad:

- Afzalpur road to Aland road- 8.1Kms(NH150E to SH10)
- Aland road to Humnabad road- 9Kms(SH10 to NH150)
- Humnabad road to Sedam Road- 11Kms (NH150 to SH10)
- Sedam Road to Shahabad road- 5 Kms (SH10 to NH150)
- Shahabad road to Jewargi road-7 Kms (NH150 to NH50)
- Jewargi road to Afzalpur road - arround 15 kms is out of this project and will be executed by Kalaburagi/Gulbarga Urban Development Authority.

Source: Gulbargasuperfast Developments FB page

 
121 - 140 of 142 Posts
Top