ಪುತ್ತೂರು: ಸಖಾಸಗಿ ವ್ಯಕ್ತಿಗಳ ದೇಣಿಗೆಯಲ್ಲೇ ಇಡೀ ನಗರಕ್ಕೆ ಸಿ.ಸಿ. ಕ್ಯಾಮರಾ ಕಣ್ಗಾವಲು ಅಳವಡಿಸಿ, ಪೊಲೀಸ್* ಠಾಣೆಯಲ್ಲೇ ಅದರ ಕಂಟ್ರೋಲ್* ರೂಮ್* ತೆರೆದ ರಾಜ್ಯದ ಮೊದಲ ನಗರ ಎಂಬ ಖ್ಯಾತಿಗೆ ಪುತ್ತೂರು ಪಾತ್ರವಾಗಿದೆ.
ಎರಡು ವರ್ಷಗಳ ಹಿಂದೆ ಆರಂಭಗೊಂಡ ಈಗಲ್* ಐ ಪ್ರಾಜೆಕ್ಟ್ ಎಂಬ ಹೆಸರಿನ ಈ ಯೋಜನೆ ಪೂರ್ಣಗೊಂಡಿದ್ದು, ಪುತ್ತೂರು ನಗರ ಠಾಣೆಯಲ್ಲಿ ಇದರ ಕಂಟ್ರೋಲ್* ಕಾರ್ಯಾರಂಭಕ್ಕೆ ಬುಧವಾರ ಚಾಲನೆ ನೀಡಲಾಗಿದೆ.
ನಗರದ ಒಕ್ಕಲಿಗ ಸಮುದಾಯ ಭವನದಲ್ಲಿ ಬುಧವಾರ ಸಂಜೆ ನಡೆದ ಸಮಾರಂಭದಲ್ಲಿ ಕಂಟ್ರೋಲ್* ರೂಂನ್ನು ಶಾಸಕಿ ಶಕುಂತಳಾ ಟಿ.ಶೆಟ್ಟಿ ಉದ್ಘಾಟಿಸಿದರು. ಜಿಲ್ಲೆಯ ಹೆಚ್ಚುವರಿ ಪೊಲಿಸ್* ಅಧೀಕ್ಷ ಕ ವಿ.ಜೆ.ಸಜಿತ್* ಅಧ್ಯಕ್ಷ ತೆ ವಹಿಸಿದ್ದರು. ಉಪ ವಿಭಾಗದ ಪೊಲೀಸ್* ಉಪಾಧೀಕ್ಷ ಕ ಶ್ರೀನಿವಾಸ್* ಬಿ.ಎಸ್*., ತಹಸೀಲ್ದಾರ್* ಅನಂತ ಶಂಕರ್*, ನಗರ ಠಾಣೆ ಇನ್*ಸ್ಪೆಕ್ಟರ್* ಮಹೇಶ್* ಪ್ರಸಾದ್* ಉಪಸ್ಥಿತರಿದ್ದರು.
ನಗರದ 13 ಕಡೆ ದಾನಿಗಳ ನೆರವಿನಿಂದ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದ್ದು,11.16 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಪೊಲೀಸ್* ಠಾಣೆಯಲ್ಲಿ ಸ್ಥಾಪಿಸಲಾದ 1.80 ಲಕ್ಷ ರೂ. ವೆಚ್ಚದ ಕಂಟ್ರೋಲ್* ರೂಮ್*ನ್ನು ಪುತ್ತೂರು ಕ್ಲಬ್* ಪ್ರಾಯೋಜಿಸಿದೆ.
ಪುರುಷರಕಟ್ಟೆ, ಮುಕ್ವೆ, ಕೂರ್ನಡ್ಕ, ದರ್ಬೆ, ಬಸ್*ನಿಲ್ದಾಣ, ನೆಲ್ಲಿಕಟ್ಟೆ, ಕೋರ್ಟ್* ರೋಡ್*, ಬನ್ನೂರು, ಕೆಮ್ಮಾಯಿ, ಕೇಪುಳು, ಲಿನೆಟ್* ಜಂಕ್ಷ ನ್*, ಮುರ, ಕಬಕಗಳಲ್ಲಿ ಸಿ.ಸಿ. ಕ್ಯಾಮರಾ ಕಾರ್ಯ ನಿರ್ವಹಿಸುತ್ತಿದ್ದು, ಬಹುತೇಕ ಕಡೆ 360 ಡಿಗ್ರಿಯಲ್ಲಿ ವಾಲುತ್ತಾ ಕೆಲಸ ಮಾಡುವ ಪಿಟಿಝಡ್* ಕ್ಯಾಮರಾ ಅಳವಡಿಸಲಾಗಿದೆ.
ಮಹೇಶ್* ಪ್ರಸಾದ್* ಪುತ್ತೂರು ನಗರ ಠಾಣೆ ಇನ್*ಸ್ಪೆಕ್ಟರ್* ಆಗಿ ಅಧಿಕಾರ ಸ್ವೀಕರಿಸಿದ ನಂತರ ಯೋಜನೆಯ ಕನಸು ಮೊಳಕೆಯೊಡೆಯಿತು. ಕಳ್ಳತನ ಪ್ರಕರಣಗಳು ನಡೆಯುತ್ತಾ ಹೋದಂತೆ ಅಲ್ಲಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವ ಬಗ್ಗೆ ಖಾಸಗಿ ಉದ್ಯಮ ಸಂಸ್ಥೆಗಳಿಗೆ ಇನ್*ಸ್ಪೆಕ್ಟರ್* ಸೂಚಿಸಲಾರಂಭಿಸಿದರು. ಪುತ್ತೂರು ಕ್ಲಬ್* ಅಧ್ಯಕ್ಷ ದೀಪಕ್* ರೈ, ಶೇಟ್* ಇಲೆಕ್ಟ್ರಾನಿಕ್ಸ್*ನ ರೂಪೇಶ್* ಶೇಟ್* ಅವರು ಈ ಕನಸಿಗೆ ಜೀವ ತುಂಬಿದ ಪರಿಣಾಮ ಪ್ರಾಜೆಕ್ಟ್ ಈಗಲ್* ಐ ರೂಪುಗೊಂಡಿತು. ರೂಪೇಶ್* ಶೇಟ್* ಅವರು ಕೋರ್ಟ್* ರಸ್ತೆಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ನಂತರ ಒಂದೊಂದೇ ಕಡೆ ದಾನಿಗಳ ಮೂಲಕ ಇದು ವಿಸ್ತರಣೆಗೊಂಡಿತು. ನಗರ ಪೊಲೀಸ್* ಠಾಣೆಯಲ್ಲಿ ಸುಸಜ್ಜಿತ ಕಂಟ್ರೋಲ್* ರೂಂ ಸ್ಥಾಪಿಸಲಾಗಿದ್ದು, ಪೊಲೀಸರೇ ನಿಯಂತ್ರಣ, ನಿರ್ವಹಣೆ, ವೀಕ್ಷ ಣೆ ಮಾಡಲಿದ್ದಾರೆ.
ಅಪರಾಧ ನಿಯಂತ್ರಣಕ್ಕೆ ಸಹಕಾರಿ
ಪುತ್ತೂರು ಈಗ ಸಂಪೂರ್ಣವಾಗಿ ಸಿ.ಸಿ. ಕ್ಯಾಮರಾ ಕಣ್ಗಾವಲಿಗೆ ಒಳಪಟ್ಟಿದೆ. ಇದರಿಂದ ಅಪರಾಧಗಳ ಪತ್ತೆಗೆ ಮಾತ್ರ ಸಹಕಾರಿಯಾಗುವುದಲ್ಲ. ಅಪರಾಧಗಳ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಎಂದು ಜಿಲ್ಲಾ ಹೆಚ್ಚುವರಿ ಎಸ್*ಪಿ ವಿ.ಜೆ.ಸಜಿತ್* ಅಧ್ಯಕ್ಷ ಸ್ಥಾನದಿಂದ ಹೇಳಿದರು.ಸಾರ್ವಜನಿಕರ ದೇಣಿಗೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿರುವುದು, ಇವುಗಳ ಕಂಟ್ರೋಲ್* ರೂಂ ಪೊಲೀಸ್* ಠಾಣೆಯಲ್ಲೇ ಇರುವುದು ಬಹುದೊಡ್ಡ ಯೋಜನೆ. ಸಾಮಾನ್ಯವಾಗಿ ನಗರಗಳಲ್ಲಿ ಖಾಸಗಿ ವ್ಯಕ್ತಿಗಳು ಸಿ.ಸಿ. ಕ್ಯಾಮರಾ ಅಳವಡಿಸಿದರೂ ಅದರ ಕಂಟ್ರೋಲ್* ವ್ಯವಸ್ಥೆ ಅವರಲ್ಲೇ ಇರುತ್ತವೆ. ಇದರಿಂದ ಅಪರಾಧ ನಡೆದಾಗ ಅಲ್ಲಿನ ದೃಶ್ಯಾವಳಿ ಪಡೆಯಲು ಪೊಲೀಸ್* ಇಲಾಖೆ ಸಾಹಸ ಪಡಬೇಕಾಗುತ್ತದೆ. ಕೆಲವೊಮ್ಮೆ ಈ ದೃಶ್ಯಾವಳಿಗಳು ಪೊಲೀಸರಿಗೆ ಸಿಗುವ ಮೊದಲು ಮಾಧ್ಯಮಗಳಿಗೆ ರವಾನೆಯಾಗುತ್ತವೆ. ಇದರಿಂದ ಪೊಲೀಸರ ತನಿಖೆಗೂ ಸಮಸ್ಯೆಯಾಗುತ್ತದೆ. ಪುತ್ತೂರಿನಲ್ಲಿ ಇದಕ್ಕಿಂತ ಭಿನ್ನವಾಗಿ ಮತ್ತು ಅಪೂರ್ವ ರೀತಿಯಲ್ಲಿ ಪ್ರಾಜೆಕ್ಟ್ ಈಗಲ್* ಐ ಜಾರಿಗೆ ಬಂದಿರುವುದು ಇಡೀ ರಾಜ್ಯದಲ್ಲೇ ಅದ್ವಿತೀಯ ಎಂದವರು ಬಣ್ಣಿಸಿದರು.
ಪುತ್ತೂರು ಅಪರಾಧ ಮುಕ್ತ ನಗರವಾಗುವತ್ತ ಹೆಜ್ಜೆ ಹಾಕುತ್ತಿದೆ ಎಂದು ಉದ್ಘಾಟಿಸಿ ಮಾತನಾಡಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ ಶ್ಲಾಘಿಸಿದರು. ಪುತ್ತೂರು ನಗರ ಠಾಣೆ ಇನ್*ಸ್ಪೆಕ್ಟರ್* ಮಹೇಶ್* ಪ್ರಸಾದ್* ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಕ್ಯಾಮರಾಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ದೃಶ್ಯಗಳನ್ನು ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತಿದೆ. ಇವುಗಳ ಕಂಟ್ರೋಲ್* ರೂಂ ನಗರ ಠಾಣೆಯಲ್ಲಿದ್ದು, ನಾವು ಕೂತಲ್ಲಿಂದಲೇ ಆಯಾ ಪ್ರದೇಶಗಳನ್ನು ಗಮನಿಸಬಹುದಾಗಿದೆ ಎಂದರು.
ಪ್ರಥಮ ಸಿ.ಸಿ. ಕ್ಯಾಮರಾ ಅಳವಡಿಸಿದ ಶೇಟ್* ಇಲೆಕ್ಟ್ರಾನಿಕ್ಸ್*ನ ರೂಪೇಶ್* ಶೇಟ್* ಸಹಕರಿಸಿದರು. ಪವಿತ್ರಾ ರೂಪೇಶ್* ಪ್ರಾರ್ಥನೆ ಹಾಡಿದರು. ಪುತ್ತೂರು ಕ್ಲಬ್* ಅಧ್ಯಕ್ಷ ದೀಪಕ್* ರೈ ಸ್ವಾಗತಿಸಿದರು. ನಗರ ಠಾಣೆ ಎಸ್*ಐ ಅಜಯ್* ಕುಮಾರ್* ವಂದಿಸಿದರು. ಪೊಲೀಸ್* ಸಿಬ್ಬಂದಿ ಹರೀಶ್* ಕುಮಾರ್* ಕಾರ್ಯಕ್ರಮ ನಿರ್ವಹಿಸಿದರು. ಸಿ.ಸಿ. ಕ್ಯಾಮರಾ ಅಳವಡಿಸಲು ಪ್ರಾಯೋಜಕತ್ವ ವಹಿಸಿದ್ದ ಎಲ್ಲ ದಾನಿಗಳನ್ನು ಗೌರವಿಸಲಾಯಿತು.